ADVERTISEMENT

ಜಾತ್ಯತೀತ ಬೆಂಬಲದಿಂದ ಸಿಟಿ ರವಿ ವಿರುದ್ಧ ಗೆಲುವು: ಎಚ್.ಡಿ.ತಮ್ಮಯ್ಯ

​ಪ್ರಜಾವಾಣಿ ವಾರ್ತೆ
Published 22 ಮೇ 2023, 15:49 IST
Last Updated 22 ಮೇ 2023, 15:49 IST
ಚಿಕ್ಕಮಗಳೂರಿನ ಸಿಪಿಐ ಕಚೇರಿಯಲ್ಲಿ ಈಚೆಗೆ ಶಾಸಕ ಎಚ್‌.ಡಿ.ತಮ್ಮಯ್ಯ ಅವರನ್ನು ಅಭಿನಂದಿಸಲಾಯಿತು
ಚಿಕ್ಕಮಗಳೂರಿನ ಸಿಪಿಐ ಕಚೇರಿಯಲ್ಲಿ ಈಚೆಗೆ ಶಾಸಕ ಎಚ್‌.ಡಿ.ತಮ್ಮಯ್ಯ ಅವರನ್ನು ಅಭಿನಂದಿಸಲಾಯಿತು   

ಚಿಕ್ಕಮಗಳೂರು: ವಿವಿಧ ಸಂಘಟನೆಗಳು ಜಾತ್ಯತೀತವಾಗಿ ಬೆಂಬಲಿಸಿದ್ದರಿಂದ ಚುನಾವಣೆಯಲ್ಲಿ ಗೆಲುವು ಸಾಧ್ಯವಾಯಿತು. ಇದು ಕ್ಷೇತ್ರದ ಜನತೆ ಗೆಲುವು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.

ನಗರದ ಸಿಪಿಐ ಕಚೇರಿಯಲ್ಲಿ ಈಚೆಗೆ ನಡೆದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಜಿಲ್ಲೆಯ ಐದೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ. ಜನರ ಆಶಯ ಈಡೇರಿಸಲು ಶ್ರಮಿಸುತ್ತೇವೆ ಎಂದರು. 

‘ಕ್ಷೇತ್ರದಲ್ಲಿ ಸೌಹಾರ್ದ, ಸಹಬಾಳ್ವೆಗೆ ಆದ್ಯತೆ ನೀಡುತ್ತೇವೆ. ಜನಸ್ನೇಹಿ ಆಡಳಿತ ನೀಡುತ್ತೇವೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುತ್ತೇವೆ’ ಎಂದು ಹೇಳಿದರು. 

ADVERTISEMENT

ಸಿಪಿಐ ಜಿಲ್ಲಾ ಘಟಕದ ಖಜಾಂಚಿ ಎಚ್‌.ಎಂ.ರೇಣುಕಾರಾಧ್ಯ, ಜಿಲ್ಲಾ ಕಾರ್ಯದರ್ಶಿ ರಾಧಾಸುಂದರೇಶ್, ಗುಣಶೇಖರ್, ವಿಜಯಕುಮಾರ್, ರಮೇಶ್, ವಸಂತ ಕುಮಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.