ADVERTISEMENT

ಫ್ಯಾಕ್ಟ್ ಚೆಕ್: ರಷ್ಯಾದ ರೈಲಿನ ಮೇಲೆ ಕೃಷ್ಣನ ಚಿತ್ರ– ಅಸಲಿಯತ್ತೇನು?

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2022, 20:15 IST
Last Updated 8 ಫೆಬ್ರುವರಿ 2022, 20:15 IST
ವೈರಲ್ ಆಗಿರುವ ಚಿತ್ರ
ವೈರಲ್ ಆಗಿರುವ ಚಿತ್ರ   

‘ರಷ್ಯಾದ ರೈಲೊಂದರ ಮೇಲೆ ಶ್ರೀಕೃಷ್ಣ ಜೀವನಗಾತೆಯನ್ನು ಸಾರುವ ಚಿತ್ರವನ್ನು ಬಿಡಿಸಲಾಗಿದೆ. ವಿಶ್ವದಾದ್ಯಂತ ಕೃಷ್ಣ ಪ್ರಜ್ಞೆ ಮೂಡಿಸಲು ಯತ್ನಿಸುತ್ತಿರುವ ಇಸ್ಕಾನ್‌ನ ಕಾರಣದಿಂದ ಇದು ಸಾಧ್ಯವಾಗಿದೆ. ಭಾರತದ ರೈಲಿನ ಮೇಲೆ ಇಂತಹ ಚಿತ್ರ ಬಿಡಿಸಿದ್ದಿದ್ದರೆ, ದೇಶದ ಜಾತ್ಯತೀತತೆಗೆ ಧಕ್ಕೆಯಾಗುತ್ತಿತ್ತು ಎಂದು ಕೆಲವರು ಸಂಸತ್ತಿನಲ್ಲಿ ಬೊಬ್ಬೆ ಹೊಡೆಯುತ್ತಿದ್ದರು’ ಎಂಬ ವಿವರ ಇರುವ ಟ್ವೀಟ್‌ನ ಸ್ಕ್ರೀನ್‌ಶಾಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರೈಲಿನ ಮೇಲೆ ಶ್ರೀಕೃಷ್ಣನ ಪೇಂಟಿಂಗ್‌ ಇರುವ ಚಿತ್ರವಿದೆ.

ಇದು ತಿರುಚಲಾದ ಚಿತ್ರ ಎಂದು ದಿ ಕ್ವಿಂಟ್ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ. ‘ಚಿತ್ರದಲ್ಲಿ ಇರುವುದು ರಷ್ಯಾದ ರೈಲಲ್ಲ. ಬದಲಿಗೆ ಆಸ್ಟ್ರೇಲಿಯಾದ ಮೆಲ್ಬರ್ನ್‌ನ ಮೆಟ್ರೊ ರೈಲು. ಆದರೆ ಅದರ ಮೇಲೆ ಶ್ರೀಕೃಷ್ಣನ ಪೇಂಟಿಂಗ್ ಇಲ್ಲ. ರೈಲಿನ ಚಿತ್ರಕ್ಕೆ ಶ್ರೀಕೃಷ್ಣ ಚಿತ್ರವನ್ನು ಸೇರಿಸಿ, ಮೂಲ ಚಿತ್ರವನ್ನು ತಿರುಚಲಾಗಿದೆ. ಜತೆಗೆ ತಪ್ಪು ಮಾಹಿತಿಯೊಂದಿಗೆ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ’ ಎಂದು ದಿ ಕ್ವಿಂಟ್ ತನ್ನ ಫ್ಯಾಕ್ಟ್‌ಚೆಕ್‌ನಲ್ಲಿ ವಿವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT