ADVERTISEMENT

ಕೊರೊನಾ: ಲಾಕ್‌ಡೌನ್ ಮೇ 4ರ ವರೆಗೆ ವಿಸ್ತರಣೆಯಾಗಲಿದೆಯೇ?

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2020, 13:54 IST
Last Updated 4 ಏಪ್ರಿಲ್ 2020, 13:54 IST
ಕೃಪೆ: ಪಿಐಬಿ ಫ್ಯಾಕ್ಟ್‌ಚೆಕ್ ಟ್ವಟರ್ ಹ್ಯಾಂಡಲ್
ಕೃಪೆ: ಪಿಐಬಿ ಫ್ಯಾಕ್ಟ್‌ಚೆಕ್ ಟ್ವಟರ್ ಹ್ಯಾಂಡಲ್   

ಬೆಂಗಳೂರು: ಕೊರೊನಾ ವೈರಸ್ ಸೋಂಕು (ಕೋವಿಡ್–19) ಹರಡದಂತೆ ತಡೆಯುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಘೋಷಿಸಿರುವ ಲಾಕ್‌ಡೌನ್ ಮೇ 4ರ ವರೆಗೂ ಮುಂದುವರಿಯಲಿದೆಯೇ?

ಮೋದಿಯವರು ದೇಶವನ್ನು ಉದ್ದೇಶಿಸಿ ಮಾತನಾಡುತ್ತಿರುವ ವಿಡಿಯೊ ಸುದ್ದಿಯ ಸ್ಕ್ರೀನ್‌ಶಾಟ್ ಜತೆ ‘ಲಾಕ್‌ಡೌನ್ ಮೇ 4ರ ವರೆಗೆ ವಿಸ್ತರಣೆ ಮಾಡಲಾಗಿದೆ’ ಎಂಬ ಸಂದೇಶ ಉಲ್ಲೇಖಿಸಿದ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ, ಇದನ್ನು ಪ್ರೆಸ್ ಇನ್‌ಫಾರ್ಮೇಷನ್ ಬ್ಯುರೋ (ಪಿಐಬಿ) ಅಲ್ಲಗಳೆದಿದೆ.

ಈ ಕುರಿತು ‘ಪಿಐಬಿ ಫ್ಯಾಕ್ಟ್‌ಚೆಕ್’ ಟ್ವಿಟರ್‌ ಹ್ಯಾಂಡಲ್‌ನಿಂದ ಸ್ಪಷ್ಟೀಕರಣ ನೀಡಿ ಟ್ವೀಟ್ ಮಾಡಲಾಗಿದೆ. ಲಾಕ್‌ಡೌನ್‌ ವಿಸ್ತರಣೆಯಂತಹ ಯಾವುದೇ ಘೋಷಣೆಯನ್ನು ಸರ್ಕಾರ ಈವರೆಗೆ ಮಾಡಿಲ್ಲ ಎಂದು ಟ್ವೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.