ADVERTISEMENT

ಫ್ಯಾಕ್ಟ್‌ಚೆಕ್‌: ರೈಲಿನತ್ತ ಕಲ್ಲು ಎಸೆದವರು ಯಾರು?

​ಪ್ರಜಾವಾಣಿ ವಾರ್ತೆ
Published 2 ಮೇ 2022, 19:30 IST
Last Updated 2 ಮೇ 2022, 19:30 IST
ಫ್ಯಾಕ್ಟ್‌ಚೆಕ್‌
ಫ್ಯಾಕ್ಟ್‌ಚೆಕ್‌   

‘ಮೆರವಣಿಗೆ ಹೋಗುತ್ತಿಲ್ಲ. ಮತ್ತೆ ನಿಮಗೇಕೆ ಸಿಟ್ಟು?’ ಎಂಬ ಒಕ್ಕಣೆ ಇರುವ ವಿಡಿಯೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. 27 ಸೆಕೆಂಡ್‌ನ ಈ ವಿಡಿಯೊದಲ್ಲಿ ಕೆಲವರು ರೈಲಿನತ್ತ ಕಲ್ಲು ತೂರುತ್ತಿರುವ ದೃಶ್ಯಗಳಿವೆ. ರೈಲಿನ ಸದ್ದಿನಿಂದ ನಮಾಜ್‌ಗೆ ಅಡಚಣೆ ಆಯಿತು ಎಂಬ ಆಕ್ರೋಶದಲ್ಲಿ ಮುಸ್ಲಿಂ ಯುವಕರು ರೈಲಿನತ್ತ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿಈ ವಿಡಿಯೊವನ್ನು ಹಂಚಿಕೊಂಡ ಕೆಲವರು ಹೇಳಿಕೊಂಡಿದ್ದಾರೆ.

ಈ ಮಾಹಿತಿ ಸುಳ್ಳು ಎಂದು ದಿ ಲಾಜಿಕಲ್ ಇಂಡಿಯನ್‌ ಫ್ಯಾಕ್ಟ್‌ಚೆಕ್‌ ವೇದಿಕೆ ಹೇಳಿದೆ. ಚೆನ್ನೈನ ಪೆರಂಬೂರು ರೈಲು ನಿಲ್ದಾಣದಲ್ಲಿ ಎರಡು ಗುಂಪುಗಳ ನಡುವೆ ನಡೆದ ಸಂಘರ್ಷದ ಸಂದರ್ಭದಲ್ಲಿ ಉಂಟಾದ ಕಲ್ಲು ತೂರಾಟದ ವಿಡಿಯೊ ಇದು ಎಂದು ‘ದಿ ಲಾಜಿಕಲ್ ಇಂಡಿಯನ್‌’ ಹೇಳಿದೆ. ರಿವರ್ಸ್‌ ಇಮೇಜ್‌ ಸರ್ಚ್‌ ವಿಧಾನದಲ್ಲಿ ಈ ವಿಡಿಯೊವನ್ನು ಪರಿಶೀಲನೆಗೆ ಒಳಪಡಿಸಲಾಗಿದೆ. ನ್ಯೂಸ್‌ 18 ವಾಹಿನಿಯಲ್ಲಿ2020ರ ಏಪ್ರಿಲ್‌ 12ರಂದು ಈ ವಿಡಿಯೊ ಪ್ರಕಟವಾಗಿದೆ. ಪೆರಂಬೂರು ರೈಲು ನಿಲ್ದಾಣದ ಸಮೀಪ ಕಾಲೇಜು ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ನಡೆದ ಸಂಘರ್ಷದ ವಿಡಿಯೊ ಎಂಬ ಮಾಹಿತಿ ಮೂಲ ವಿಡಿಯೊದ ಜತೆಗೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT