ADVERTISEMENT

ಕೇಂದ್ರ ಸರ್ಕಾರ ಕಾಶ್ಮೀರದಲ್ಲಿ ಪ್ರಾಣಿ ಬಲಿ ನಿಷೇಧಿಸಿದೆ ಎಂಬ ಟಿವಿ ಸುದ್ದಿ ಫೇಕ್!

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2019, 12:03 IST
Last Updated 13 ಆಗಸ್ಟ್ 2019, 12:03 IST
   

ಬೆಂಗಳೂರು:ಕೇಂದ್ರ ಸರ್ಕಾರ ಕಾಶ್ಮೀರದಲ್ಲಿ ಪ್ರಾಣಿ ಬಲಿಯನ್ನು ನಿಷೇಧಿಸಿ ಎಂದು ಸುದ್ದಿವಾಹಿನಿಯೊಂದು ಪ್ರಸಾರ ಮಾಡಿರುವ ಸುದ್ದಿ ಶೀರ್ಷಿಕೆಯ ಎರಡು ಸ್ಕ್ರೀನ್‌‌ಶಾಟ್‌ಗಳುಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಈದ್ ಹಬ್ಬದ ಸಲುವಾಗಿ ಶ್ರೀನಗರದಲ್ಲಿ ಮತ್ತೆ ಕರ್ಫ್ಯೂ ಹೇರಿಕೆ ಮಾಡಿದ್ದರ ಬೆನ್ನಲ್ಲೇ ಈ ಸ್ಕ್ರೀನ್‌ಶಾಟ್ ವೈರಲ್ ಆಗಿದೆ.

ಮಿರರ್ ನೌ ಸುದ್ದಿ ವಾಹಿನಿಯಲ್ಲಿ ಪ್ರಸಾರವಾದ ಸುದ್ದಿ ಎಂದು ಈ ಸ್ಕ್ರೀನ್‌ಶಾಟ್ ಹರಿದಾಡಿದ್ದು, ಇದು ನಮ್ಮ ವಾಹಿನಿಯ ಸುದ್ದಿ ಅಲ್ಲ ಎಂದು ಮಿರರ್ ನೌ ಸಂಪಾದಕಿ ಫೇ ಡಿಸೋಜಾ ಟ್ವೀಟ್ ಮಾಡಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸ್ಕ್ರೀನ್‌ಶಾಟ್ ಫೋಟೊಶಾಪ್ ಮಾಡಿದ್ದಾಗಿದ್ದು, ಮಿರರ್ ನೌ ಆ ರೀತಿಯ ಸುದ್ದಿಗಳನ್ನು ಪ್ರಸಾರ ಮಾಡಿಲ್ಲ ಎಂದಿದ್ದಾರೆ ಫೇ ಡಿಸೋಜಾ.

ADVERTISEMENT

ಇದೊಂದು ಫೇಕ್‌ ಸ್ಕ್ರೀನ್, ಸುಳ್ಳು, ಫೋಟೊಶಾಪ್ ಮಾಡಿದ್ದು.ಇದರಲ್ಲಿ ಕೆಳಭಾಗದಲ್ಲಿರುವ Tickerಇಲ್ಲ.ನಮ್ಮ ವಾಹಿನಿಯಲ್ಲಿ ಬಳಸುವ ಫಾಂಟ್ ಇದಲ್ಲ.ಇದು ಮಿರರ್ ನೌನಲ್ಲಿ ಪ್ರಕಟವಾದ ಸುದ್ದಿ ಅಲ್ಲ ಎಂದು ಫೇ ಅವರು ಟ್ವೀಟಿಸಿದ್ದಾರೆ.

ಫೋಟೊಶಾಪ್ ಮಾಡಿರುವ ಈ ಸ್ಕ್ರೀನ್‌ಶಾಟ್‌ನಲ್ಲಿ ಕಾಣುತ್ತಿರುವ ಮಿರರ್ ನೌ ಪತ್ರಕರ್ತಪ್ರಮೋದ್ ಮಾಧವ್ ಫೋಟೊ ಮತ್ತು ಹೆಸರು, ಕೇರಳದಲ್ಲಿ ಪ್ರವಾಹ ಸುದ್ದಿಯ ವಿಡಿಯೊದ್ದಾಗಿದೆ.ಅದು ಕಾಶ್ಮೀರದಲ್ಲಿನ ವರದಿ ಅಲ್ಲ ಎಂದು ಬೂಮ್ ಲೈವ್ ಫ್ಯಾಕ್ಟ್‌ಚೆಕ್ ಮಾಡಿದೆ.

ಫ್ಯಾಕ್ಟ್‌ಚೆಕ್
ಮಿರರ್ ನೌ ವರದಿ ಮಾಡಿದ ಸುದ್ದಿಗಳನ್ನು ಬೂಮ್ ಲೈವ್ ಪರಿಶೀಲಿಸಿದ್ದು, ಈ ರೀತಿಯ ಸುದ್ದಿಯನ್ನು ಪ್ರಸ್ತುತ ಸುದ್ದಿವಾಹಿನಿ ಪ್ರಕಟಿಸಿಲ್ಲ ಎಂದಿದೆ.

2109 ಆಗಸ್ಟ್ 11ರಿಂದಲೇ ಈ ಚಿತ್ರ ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿದೆ.

ಕಾಶ್ಮೀರದ ಸಾಮಾಜಿಕ ಹೋರಾಟಗಾರ್ತಿ ಮತ್ತು ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಮೂವ್‌ಮೆಂಟ್ ( ಜೆಕೆಪಿಎಂ) ಪಕ್ಷದ ಸದಸ್ಯರಾಗಿರುವ ಶೆಹಲಾ ರಶೀದ್ ಅವರು ಈ ಸ್ಕ್ರೀನ್‌ಶಾಟ್‌ನ್ನು ಟ್ವೀಟ್ ಮಾಡಿದ್ದು ಇದು ಫೋಟೊಶಾಪ್ ಮಾಡಿದ ಚಿತ್ರ ಎಚ್ಚರದಿಂದಿರಿ ಎಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.