ADVERTISEMENT

Fact Check | ಕೋಲ್ಕತ್ತ ಅತ್ಯಾಚಾರ ಪ್ರಕರಣದ ತನಿಖೆಯಿಂದ ಸಿಬಿಐ ಹಿಂದೆ ಸರಿದಿಲ್ಲ

ಫ್ಯಾಕ್ಟ್ ಚೆಕ್
Published 28 ಆಗಸ್ಟ್ 2024, 22:30 IST
Last Updated 28 ಆಗಸ್ಟ್ 2024, 22:30 IST
   

ಸಾಮಾಜಿಕ ಜಾಲತಾಣಗಳ ಹಲವು ಬಳಕೆದಾರರು ಡಾ.ಆಕಾಶ್ ನಾಗ್ ಎನ್ನುವವರ ಪತ್ರದ ಸ್ಕ್ರೀನ್ ಶಾಟ್ ಹಂಚಿಕೊಳ್ಳುತ್ತಿದ್ದಾರೆ. ಅವರು ಕೋಲ್ಕತ್ತದ ಅಪರಾಧ ವಿಭಾಗದ ಡಿಐಜಿ ಮತ್ತು ಜಂಟಿ ನಿರ್ದೇಶಕ ಎಂದು ಪ್ರತಿಪಾದನೆ ಮಾಡಲಾಗುತ್ತಿದೆ. ರಾಜಕೀಯ ಹಸ್ತಕ್ಷೇಪ ಮತ್ತು ಸಾಮಾಜಿಕ ಒತ್ತಡದಿಂದಾಗಿ ಕೋಲ್ಕತ್ತ ಅತ್ಯಾಚಾರ ಪ್ರಕರಣದ ತನಿಖೆಯಿಂದ ಹಿಂದೆ ಸರಿಯುವಂತೆ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಿರುವುದಾಗಿಯೂ, ಕೇಂದ್ರ ಅಪರಾಧ ದಳವು (ಸಿಬಿಐ) ಪ್ರಕರಣದ ತನಿಖೆಯಿಂದ ಹಿಂದೆ ಸರಿದಿರುವುದಾಗಿಯೂ ಪ್ರಚಾರ ಮಾಡಲಾಗುತ್ತಿದೆ. ಆದರೆ, ಇದು ಸುಳ್ಳು.

ಪತ್ರಗಳನ್ನು ಸೂಕ್ಷ್ಮವಾಗಿ ಪರಿಶೀಲನೆ ನಡೆಸಿದಾಗ, ಆಕಾಶ್ ನಾಗ್ ಎನ್ನುವ ಹೆಸರು ಹಲವು ರೀತಿ ಉಲ್ಲೇಖಗೊಂಡಿರುವುದು ಕಂಡುಬಂತು. ಮುಂದುವರಿದು, ಈ ಕುರಿತು ಕೀ ವರ್ಡ್ ಸರ್ಚ್ ಮಾಡಿದಾಗ, ಪ್ರಕರಣದ ತನಿಖೆಯಿಂದ ಹಿಂದೆ ಸರಿದಿಲ್ಲ ಎಂದು ಸಿಬಿಐ ನೀಡಿರುವ ಸ್ಪಷ್ಟನೆ ಸಿಕ್ಕಿತು. ಜತೆಗೆ, ಕೋಲ್ಕತ್ತ ಪೊಲೀಸ್ ಇಲಾಖೆಯ ಅಧಿಕಾರಿಗಳ ಪಟ್ಟಿಯನ್ನು ಪರಿಶೀಲಿಸಿದಾಗ, ಡಾ.ಆಕಾಶ್ ನಾಗ್ ಎನ್ನುವ ಹೆಸರು ಪತ್ತೆಯಾಗಲಿಲ್ಲ. ಕೋಲ್ಕತ್ತ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವರು ನಕಲಿ ಪತ್ರವನ್ನು ಹಂಚಿಕೊಳ್ಳುವ ಮೂಲಕ ಸುಳ್ಳು ಪ್ರತಿಪಾದನೆ ಮಾಡುತ್ತಿದ್ದಾರೆ. ಈ ಬಗ್ಗೆ ಪಿಟಿಐ ಫ್ಯಾಕ್ಟ್ ಚೆಕ್ ಪ್ರಕಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT