ADVERTISEMENT

ಫ್ಯಾಕ್ಟ್ ಚೆಕ್: ದೆಹಲಿಯಲ್ಲಿ ಸುರಿದ ಮಳೆಗೆ ವಾಹನಗಳು ಕೊಚ್ಚಿಕೊಂಡು ಹೋಗಿದ್ದವೇ?

ಫ್ಯಾಕ್ಟ್ ಚೆಕ್
Published 29 ಜುಲೈ 2025, 0:12 IST
Last Updated 29 ಜುಲೈ 2025, 0:12 IST
.
.   

ರಾಜಧಾನಿ ನವದೆಹಲಿಯಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಗೆ ಅಂಡರ್‌ ಪಾಸ್‌ ಒಂದರಲ್ಲಿ ವಾಹನಗಳು ಕೊಚ್ಚಿ ಹೋಗುತ್ತಿರುವ ವಿಡಿಯೊ ತುಣಕನ್ನು ಸಾಮಾಜಿಕ ಜಾಲತಾಣಗಳ ಬಳಕೆದಾರರು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ. ಇದು ನಿಜವಾದ ವಿಡಿಯೊವಲ್ಲ. 

ವಿಡಿಯೊ ತುಣುಕಿನ ಕೀ ಫ್ರೇಮ್‌ ಅನ್ನು ಗೂಗಲ್‌ ಲೆನ್ಸ್‌ನಲ್ಲಿ ಹಾಕಿ ಹುಡುಕಾಟ ನಡೆಸಿದಾಗ ಹಲವರು ಈ ವಿಡಿಯೊವನ್ನು ಹಂಚಿಕೊಂಡಿರುವುದು ತಿಳಿದು ಬಂತು. ನಂತರ ನಿರ್ದಿಷ್ಟ ಪದಗಳನ್ನು ಬಳಸಿ ಗೂಗಲ್‌ನಲ್ಲಿ ಹುಡುಕಾಡಿದಾಗ, ಈ ಬಗ್ಗೆ ನಂಬಲರ್ಹ ಮಾಧ್ಯಮ ವರದಿಗಳು ಸಿಗಲಿಲ್ಲ. ವಿಡಿಯೊ ತುಣಕನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಇದು ಎಐ ವಿಡಿಯೊ ಆಗಿರುವ ಅನುಮಾನ ವ್ಯಕ್ತವಾಯಿತು. ವಿಡಿಯೊವನ್ನು ಕ್ಯಾಂಟಿಲಕ್ಸ್‌ ಎಂಬ ಎಐ ಪತ್ತೆ ಟೂಲ್‌ನಲ್ಲಿ ಹಾಕಿದಾಗ, ಅದು ಎಐ ವಿಡಿಯೊ ಎಂಬುದು ದೃಢಪಟ್ಟಿತು ಎಂದು ಪಿಟಿಐ ಫ್ಯಾಕ್ಟ್‌ಚೆಕ್‌ ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT