ADVERTISEMENT

Fact Check | ಯೋಧರನ್ನು ಕೊಂದಿದ್ದು ಸಿಖ್ ಧರ್ಮೀಯ ಅಲ್ಲ

ಪ್ರಜಾವಾಣಿ ವಿಶೇಷ
Published 18 ಏಪ್ರಿಲ್ 2023, 23:30 IST
Last Updated 18 ಏಪ್ರಿಲ್ 2023, 23:30 IST
   

ಇದೇ 14ರಂದು ಬಟಿಂಡಾದ ಸೇನಾನೆಲೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ನಾಲ್ವರು ಯೋಧರು ಮೃತಪಟ್ಟಿದ್ದರು. ಈ ನಾಲ್ವರು ಸೈನಿಕರು ಹಿಂದೂ ಧರ್ಮೀಯರಾಗಿದ್ದು, ಗುಂಡಿಟ್ಟು ಕೊಂದ ವ್ಯಕ್ತಿ ಸಿಖ್ ಧರ್ಮೀಯ ಎಂಬುದಾಗಿ ಸಾಮಾಜಿಕ ಜಾಲಾತಾಣಗಳಲ್ಲಿ ಹೇಳಲಾಗಿದೆ. ಹತ್ಯೆಗೀಡಾದ ಸೈನಿಕರು ‘18 ಹಾರ್ಸ್ ರೆಜಿಮೆಂಟ್‌’ಗೆ ಸೇರಿದವರು ಎಂಬುದಾಗಿ ‘ಸ್ಯಾಫ್ರನ್‌ ಡೈರೀಸ್’ ಎಂಬ ಟ್ವಿಟರ್ ಖಾತೆಯಲ್ಲಿ ಉಲ್ಲೇಖಿಸಲಾಗಿದೆ. ಈ ಟ್ವೀಟ್‌ ಅನ್ನು ಏಳು ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿದ್ದಾರೆ. ಆದರೆ ಈ ಮಾಹಿತಿ ತಪ್ಪು.

ಟ್ವೀಟ್‌ನಲ್ಲಿ ಉಲ್ಲೇಖಿಸಿರುವ ‘18 ಹಾರ್ಸ್ ರೆಜಿಮೆಂಟ್‌’ ಪಾಕಿಸ್ತಾನದ ಸೇನೆಯ ಒಂದು ವಿಭಾಗವಾಗಿದ್ದು, ಬಂಟಿಡಾದಲ್ಲಿ ಹತ್ಯೆಗೀಡಾದ ಯೋಧರು ಈ ವಿಭಾಗಕ್ಕೆ ಸೇರಿದವರು ಎಂಬುದು ತಪ್ಪು ಮಾಹಿತಿ ಎಂದು ಪಿಟಿಐ ಫ್ಯಾಕ್ಟ್ ಚೆಕ್ ಪ್ರಕಟಿಸಿದೆ. ಭಾರತ ಸೇನೆಯ ‘80 ಆರ್ಟಿಲರಿ ರೆಜಿಮೆಂಟ್‌’ಗೆ ಸೇರಿದ ಯೋಧರು ಹತ್ಯೆಯಾಗಿದ್ದಾರೆ. ಯೋಧರನ್ನು ಹತ್ಯೆ ಮಾಡಿದ ಆರೋಪಿಗಳು ಯಾವ ಧರ್ಮದವರು ಎಂಬುದು ಇನ್ನೂ ಖಚಿತಪಟ್ಟಿಲ್ಲ. ಎಫ್‌ಐಆರ್‌ನಲ್ಲಿ ಇಬ್ಬರು ಅಪರಿಚಿತರು ಎಂದು ಉಲ್ಲೇಖಿಸಲಾಗಿದೆ. ಈ ಪೈಕಿ ದೇಸಾಯಿ ಮೋಹನ್ ಎಂಬ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT