ADVERTISEMENT

ಫ್ಯಾಕ್ಟ್‌ಚೆಕ್ | ಉತ್ತರ ಪ್ರದೇಶದಲ್ಲಿ ಸಾಧುಗಳ ಮೇಲೆ ಮುಸ್ಲಿಮರು ಹಲ್ಲೆ ನಡೆಸಿಲ್ಲ

​ಪ್ರಜಾವಾಣಿ ವಾರ್ತೆ
Published 13 ಮೇ 2020, 3:05 IST
Last Updated 13 ಮೇ 2020, 3:05 IST
   
""

ಉತ್ತರ ಪ್ರದೇಶದ ವೃಂದಾವನದಲ್ಲಿ ಮೂವರು ಸಾಧುಗಳನ್ನು ಬಾಂಗ್ಲಾದೇಶಿ ಮುಸ್ಲಿಮರು ಹತ್ಯೆ ಮಾಡಿದ್ದಾರೆ. ಹತ್ಯೆಕೋರರು ತಲೆಮರೆಸಿಕೊಂಡಿದ್ದಾರೆ. ಪೊಲೀಸರು ಸುಮ್ಮನೆ ಕುಳಿತಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮುಖದಿಂದ ರಕ್ತ ಸುರಿಯುತ್ತಿರುವ ಸಾಧುಗಳ ಚಿತ್ರವೂ ವೈರಲ್ ಆಗಿದೆ.

ಈ ಸುದ್ದಿ ಸುಳ್ಳು ಎಂದು ಮಥುರಾ ಪೊಲೀಸರು ಟ್ವೀಟ್ ಮಾಡಿದ್ದಾರೆ. ‘ಆಸ್ತಿ ವ್ಯಾಜ್ಯದ ಕಾರಣ ಸಾಧುಗಳು ಮತ್ತು ದೇವಾಲಯದ ಟ್ರಸ್ಟಿಗಳು ಪರಸ್ಪ‍ರ ಹೊಡೆದಾಡಿಕೊಂಡಿದ್ದಾರೆ. ಸಾಧುಗಳು ಗಾಯಗೊಂಡಿದ್ದಾರೆ ಅಷ್ಟೆ, ಜೀವಹಾನಿ ಆಗಿಲ್ಲ. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಟ್ರಸ್ಟಿಗಳಲ್ಲಿ ಒಬ್ಬನನ್ನು ಬಂಧಿಸಲಾಗಿದೆ. ಈ ಹಲ್ಲೆಯಲ್ಲಿ ಮುಸ್ಲಿಮರ ಪಾತ್ರವಿಲ್ಲ’ ಎಂದು ಟ್ವೀಟ್‌ನಲ್ಲಿ ವಿವರಿಸಲಾಗಿದೆ.

ಮಥುರಾ ಪೊಲೀಸರು ಟ್ವೀಟ್ ಮಾಡಿರುವ ಹೇಳಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT