ADVERTISEMENT

Fact Check | ಬೀದಿ ನಾಟಕವನ್ನು ನೈಜ ಘಟನೆ ಎಂದು ಬಿಂಬಿಸಿದ ಜಾಲತಾಣ ಬಳಕೆದಾರರು

ಫ್ಯಾಕ್ಟ್ ಚೆಕ್
Published 24 ಮೇ 2023, 0:03 IST
Last Updated 24 ಮೇ 2023, 0:03 IST
   

ಮಹಿಳೆಯೊಬ್ಬರು ಸಂಚರಿಸುತ್ತಿದ್ದ ಕಾರನ್ನು ತಡೆದ ಇಬ್ಬರು ವ್ಯಕ್ತಿಗಳು, ಕಾರಿನಿಂದ ಮಹಿಳೆಯನ್ನು ಹೊರಗೆಳೆದು ಗುಂಡಿನ ದಾಳಿ ನಡೆಸುವ ದೃಶ್ಯ ಇರುವ ವಿಡಿಯೊವೊಂದು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. @HiNdU05019434 ಹೆಸರಿನ ಖಾತೆ ಸೇರಿದಂತೆ ಹಲವು ಟ್ವಿಟರ್ ಖಾತೆಗಳಲ್ಲಿ ಈ ವಿಡಿಯೊ ಅಪ್‌ಲೋಡ್ ಆಗಿದೆ. ಕಾರಿನಲ್ಲಿ ಹೋಗುತ್ತಿದ್ದ ಮಹಿಳೆ ಆರ್‌ಎಸ್‌ಎಸ್ ಸದಸ್ಯೆಯಾಗಿದ್ದ ಕಾರಣಕ್ಕೆ ಜಿಹಾದಿಗಳು ಹತ್ಯೆ ಮಾಡಿದ್ದಾರೆ ಎಂದು ಈ ವಿಡಿಯೊವನ್ನು ಹಂಚಿಕೊಂಡವರು ಆರೋಪಿಸಿದ್ದಾರೆ. ಆದರೆ ಇದು ನೈಜ ಘಟನೆಯಲ್ಲ. ಇದು ಬೀದಿನಾಟಕದ ದೃಶ್ಯ.

ಕರ್ನಾಟಕದಲ್ಲಿ ಗೌರಿ ಲಂಕೇಶ್ ಅವರ ಹತ್ಯೆಗೆ ಪ್ರತಿರೋಧವಾಗಿ ಕೇರಳದ ಮಲಪ್ಪುರಂ ಡಿವೈಎಫ್‌ಐ ಘಟಕವು ಬೀದಿನಾಟಕವೊಂದನ್ನು ಪ್ರದರ್ಶಿಸಿತ್ತು. 2017ರಲ್ಲಿ ಮಾಡಲಾದ ಬೀದಿನಾಟಕದ ವಿಡಿಯೊವನ್ನು ನೈಜ ಘಟನೆ ಎಂಬಂತೆ ಹಾಗೂ ಇತ್ತೀಚೆಗೆ ನಡೆದಿದ್ದು ಎಂಬಂತೆ ತಪ್ಪಾಗಿ ಅರ್ಥೈಸಿಕೊಂಡು ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ ಎಂದು ‘ಆಲ್ಟ್ ನ್ಯೂಸ್’ ವರದಿ ಮಾಡಿದೆ. ಮಾತೃಭೂಮಿ, ಹಿಂದೂಸ್ತಾನ್ ಟೈಮ್ಸ್ ಸೇರಿದಂತೆ ಹಲವು ಪತ್ರಿಕೆಗಳು ಅಂದು ನಡೆದಿದ್ದ ಬೀದಿನಾಟಕದ ವರದಿಯನ್ನು ಪತ್ರಿಕೆಗಳಲ್ಲಿ ಪ್ರಕಟಿಸಿದ್ದವು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT