ADVERTISEMENT

Fact Check: ಕಾಂಗ್ರೆಸ್‌ಗೆ ಬಹುಮತ: ಪಾಕ್ ಪ್ರಧಾನಿ ಶುಭ ಕೋರಿದರೇ?

Fact Check

ಫ್ಯಾಕ್ಟ್ ಚೆಕ್
Published 18 ಮೇ 2023, 19:15 IST
Last Updated 18 ಮೇ 2023, 19:15 IST
ಶಹಬಾಜ್ ಷರೀಫ್
ಶಹಬಾಜ್ ಷರೀಫ್   

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಪಡೆದಿದ್ದಕ್ಕೆ ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಅವರು ಶುಭ ಕೋರಿದ್ದಾರೆ ಎಂದು ಹೇಳಲಾಗುವ ಟ್ವೀಟ್‌ನ ಸ್ಕ್ರೀನ್‌ಶಾಟ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ‘ಕಾಂಗ್ರೆಸ್ ಅನ್ನು ಆರಿಸಿದ ಕರ್ನಾಟಕದ ಜನರಿಗೆ ಹೃದಯಪೂರ್ವಕ ಧನ್ಯವಾದಗಳು. ಕಾಂಗ್ರೆಸ್ ಹಾಗೂ ನಮ್ಮ ಎಸ್‌ಡಿಪಿಐ ಜೊತೆಗೂಡಿ ಭಾರತದಲ್ಲಿ ಇಸ್ಲಾಂ ಸದೃಢಗೊಳಿಸಲು ಕೆಲಸ ಮಾಡಲಿವೆ ಹಾಗೂ ಕರ್ನಾಟಕದ ಸಾರ್ವಭೌಮತೆಯನ್ನು ಕಾಪಾಡಲಿವೆ ಎಂಬ ಆಶಾಭಾವ ಇದೆ’ ಎಂದು ಮೇ 13ರಂದು ಷರೀಫ್ ಟ್ವೀಟ್ ಮಾಡಿದ್ದಾರೆ ಎಂದು ಹೇಳಲಾಗಿದೆ. ಈ ಸ್ಕ್ರೀನ್‌ಶಾಟ್‌ ಅನ್ನು ಸಾವಿರಾರು ಜನರು ಹಂಚಿಕೊಂಡಿದ್ದಾರೆ. ಆದರೆ ಇದು ಸುಳ್ಳು ಸುದ್ದಿ.

ಶಹಬಾಜ್ ಷರೀಫ್ ಅವರು ಮೇ 13ರಂದು ಮೂರು ಟ್ವೀಟ್‌ಗಳನ್ನು ಮಾಡಿದ್ದು, ಅವುಗಳಲ್ಲಿ ಕರ್ನಾಟಕದ ಚುನಾವಣೆ ಬಗ್ಗೆ ಯಾವುದೇ ಉಲ್ಲೇಖ ಇಲ್ಲ ಎಂದು ‘ಆಲ್ಟ್ ನ್ಯೂಸ್’ ವರದಿ ಮಾಡಿದೆ. ಅವರ ಹೆಸರಿನಲ್ಲಿ ಸೃಷ್ಟಿಸಲಾಗಿರುವ ನಕಲಿ ಟ್ವೀಟ್‌ನ ಸ್ಕ್ರೀನ್‌ಶಾಟ್‌ ಅನ್ನು, @BHKtweets ಹೆಸರಿನ ಟ್ವಿಟರ್‌ ಖಾತೆಯಲ್ಲಿ ಮೇ 13ರ ಸಂಜೆ 4 ಗಂಟೆಗೆ ಅಪ್‌ಲೋಡ್ ಮಾಡಲಾಗಿತ್ತು. ರಾತ್ರಿ 10 ಗಂಟೆಯ ವೇಳೆಗೆ ಇದನ್ನು ತೆಗೆದುಹಾಕಲಾಗಿತ್ತು. ಷರೀಫ್ ಕುರಿತಂತೆ ಹಲವು ನಕಲಿ ಟ್ವೀಟ್‌ಗಳನ್ನು ಇದೇ ಖಾತೆಯಲ್ಲಿ ಈ ಹಿಂದೆ ಪ್ರಕಟಿಸಲಾಗಿತ್ತು. ಷರೀಫ್ ಅವರು ಶುಭಕೋರಿದ್ದು ನಿಜ ಎಂದು ಭಾವಿಸಿದ ಸಾಮಾಜಿಕ ಜಾಲತಾಣ ಬಳಕೆದಾರರು ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಳ್ಳುತ್ತಿದ್ದಾರೆ ಎಂದು ಆಲ್ಟ್ ನ್ಯೂಸ್ ವರದಿ ಮಾಡಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT