ADVERTISEMENT

Fact Check:ಜಾಕೆಟ್‌ ಷೂ ಬದಲಿಸಬೇಕು ಎಂದು ರಾಹುಲ್‌ ಹೇಳಿರುವುದು ತಿರುಚಿದ ವಿಡಿಯೊ

Fact Check

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2023, 19:08 IST
Last Updated 19 ಸೆಪ್ಟೆಂಬರ್ 2023, 19:08 IST
<div class="paragraphs"><p>ರಾಹುಲ್‌ ಗಾಂಧಿ</p></div>

ರಾಹುಲ್‌ ಗಾಂಧಿ

   

ಪಿಟಿಐ ಚಿತ್ರ

ರಾಹುಲ್ ಗಾಂಧಿ ಅವರು ಸುದ್ದಿ ವಾಹಿನಿ ಒಂದಕ್ಕೆ ಸಂದರ್ಶನ  ನೀಡುತ್ತಿರುವ ವಿಡಿಯೊ ಒಂದು ಸಾಮಾಜಿಕ ಜಾತಾಣಗಳಲ್ಲಿ ಹರಿದಾಡುತ್ತಿದೆ. 38 ಸೆಕೆಂಡ್‌ಗಳ ಆ ವಿಡಿಯೊದಲ್ಲಿ ರಾಹುಲ್ ಅವರು, ‘ನಾವು ಗೆಲ್ಲಬೇಕು ಅಂದರೆ, ಜಾಕೆಟ್‌ ಮತ್ತು ಷೂಗಳನ್ನು ಬದಲಿಸಬೇಕು’ ಎಂದು ಹೇಳುತ್ತಾರೆ. ಆಗ ಪತ್ರಕರ್ತ, ‘ಅದು ಹೇಗೆ ಎಂದು ವಿವರಿಸುತ್ತೀರಾ’ ಎಂದು ಪ್ರಶ್ನಿಸುತ್ತಾರೆ. ಆಗ ರಾಹುಲ್ ಅವರು ಮೇಲೆ–ಕೆಳಗೆ ನೋಡುತ್ತಾರೆ. ಆದರೆ, ಇದು ತಿರುಚಲಾದ ವಿಡಿಯೊ ಆಗಿದೆ.

ADVERTISEMENT

‘ಇದು 2014ರಲ್ಲಿ ಆಜತಕ್‌ ನಡೆಸಿದ್ದ ಸಂದರ್ಶನದ ವಿಡಿಯೊ. 26 ನಿಮಿಷದ ಆ ವಿಡಿಯೊದಲ್ಲಿ ರಾಹುಲ್ ಅವರು ಒಮ್ಮೆ, ‘ನಾವು ಗೆಲ್ಲಬೇಕು ಅಂದರೆ ರಾಜಕೀಯ ಪಕ್ಷಗಳನ್ನು ಬದಲಿಸಬೇಕು’ ಎಂದಿದ್ದಾರೆ. ಮತ್ತೊಂದೆಡೆ, ‘ಜಾಕೆಟ್‌ ಮತ್ತು ಷೂಗಳನ್ನು ಧರಿಸಿಯೇ ಇದ್ದೇನೆ’ ಎಂದಿದ್ದಾರೆ. ಈ ಎರಡೂ ವಿಡಿಯೊ ತುಣುಕುಗಳನ್ನು ತೆಗೆದುಕೊಂಡು, ‘ನಾವು ಗೆಲ್ಲಬೇಕು ಅಂದರೆ, ಜಾಕೆಟ್‌ ಮತ್ತು ಷೂಗಳನ್ನು ಬದಲಿಸಬೇಕು’ ಎಂದು ವಿಡಿಯೊವನ್ನು ಸೃಷ್ಟಿಸಲಾಗಿದೆ. ಇದು ರಾಹುಲ್‌ ಗಾಂಧಿ ಅವರನ್ನು ದಡ್ಡ ಎಂದು ಬಿಂಬಿಸಲು ಸೃಷ್ಟಿಸಲಾದ ವಿಡಿಯೊ. ಇದಕ್ಕೂ, ಸಂದರ್ಶನದ ಮೂಲ ವಿಡಿಯೊಗೂ ಬಹಳ ವ್ಯತ್ಯಾಸವಿದೆ’ ಎಂದು ಬೂಮ್‌ಲೈವ್‌ ಫ್ಯಾಕ್ಟ್‌ಚೆಕ್‌ ಪ್ರಕಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.