ADVERTISEMENT

Fact Check | ರಾಹುಲ್‌ ಗಾಂಧಿಗೆ 420 ನಂಬರ್‌ ಇರುವ ಬ್ಯಾಡ್ಜ್‌ ತೊಡಿಸಿರಲಿಲ್ಲ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2023, 0:16 IST
Last Updated 29 ಸೆಪ್ಟೆಂಬರ್ 2023, 0:16 IST
<div class="paragraphs"><p>ಫ್ಯಾಕ್ಟ್ ಚೆಕ್</p></div>

ಫ್ಯಾಕ್ಟ್ ಚೆಕ್

   

‘ಎಂಥ ಮೂರ್ಖ. ಬ್ಯಾಡ್ಜ್‌ ನಂ. 420 ಆತನ ವ್ಯಕ್ತಿತ್ವಕ್ಕೆ ಸರಿಯಾಗಿ ಹೊಂದುತ್ತದೆ. ಆತ ನಂಬಿಕೆಗೆ ಅನರ್ಹ ಕೂಡ. ತಲೆಯ ಮೇಲೆ ಗಾಲಿ ಇರುವ ಬ್ಯಾಗ್‌ ಅನ್ನು ಹೊತ್ತುಕೊಂಡು ಓಡಾಡಿದ್ದ ಎನ್ನುವುದನ್ನು ಮರೆಯುವುದು ಬೇಡ. ಇಂಥ ಮೂರ್ಖ ದೇಶದ ಪ್ರಧಾನಿ ಆಗಬೇಕು ಎಂದು ಬಯಸುತ್ತಿದ್ದಾರೆ’ ಎಂದು ಪ್ರವೀಣ್ ಪಟೇಲ್‌ ಅವರು ‘ಎಕ್ಸ್‌’ನಲ್ಲಿ ಬರೆದುಕೊಂಡಿದ್ದಾರೆ. ಇದರೊಂದಿಗೆ ರಾಹುಲ್‌ ಗಾಂಧಿ ಅವರು 420 ಬ್ಯಾಡ್ಜ್‌ ನಂ. ಹಾಕಿಕೊಂಡಿದ್ದಾರೆ ಎನ್ನಲಾದ ಫೋಟೊವನ್ನು ಹಂಚಿಕೊಂಡಿದ್ದಾರೆ. ಆದರೆ, ಇದು ತಿರುಚಲಾದ ಚಿತ್ರ.

ಸಂಸದ ರಾಹುಲ್‌ ಗಾಂಧಿ ಅವರು ದೆಹಲಿಯ ಆನಂದ ವಿಹಾರ ರೈಲು ನಿಲ್ದಾಣಕ್ಕೆ ಇದೇ 21ರಂದು ಭೇಟಿ ನೀಡಿ, ಅಲ್ಲಿ ಕೆಲಸ ಮಾಡುವ ಕೂಲಿಗಳೊಂದಿಗೆ ಮಾತುಕತೆ ನಡೆಸಿದ್ದರು. ಈ ಕುರಿತು ಚಿತ್ರ ಹಾಗೂ ವಿಡಿಯೊವನ್ನು ರಾಹುಲ್‌ ಗಾಂಧಿ ಅವರೇ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಈ ದೃಶ್ಯಗಳಲ್ಲಿ ಅವರು 756 ಸಂಖ್ಯೆಯ ಬ್ಯಾಡ್ಜ್‌ ಹಾಕಿಕೊಂಡಿರುವುದು ಕಾಣಿಸುತ್ತದೆ. ಅದನ್ನೇ ತಿರುಚಿ, 420 ಎಂದು ಕಾಣುವಂತೆ ಮಾಡಲಾಗಿದೆ. ಆದ್ದರಿಂದ, ಇದೊಂದು ತಿರುಚಲಾದ ಚಿತ್ರ ಎಂದು ಬೂಮ್‌ಲೈವ್‌ ಮತ್ತು ದಿ ಕ್ವಿಂಟ್‌ ಫ್ಯಾಕ್ಟ್‌ಚೆಕ್‌ ಪ್ರಕಟಿಸಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.