ADVERTISEMENT

Fact Check: ಮೆಟ್ರೊ ನಿಲ್ದಾಣದಲ್ಲಿ ಬಿಎಸ್‌ಪಿ ಗೆಲುವಿನ ಫಲಕ?

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2022, 20:30 IST
Last Updated 6 ಫೆಬ್ರುವರಿ 2022, 20:30 IST
fact check: ಮೆಟ್ರೊ ನಿಲ್ದಾಣದಲ್ಲಿ ಬಿಎಸ್‌ಪಿ ಗೆಲುವಿನ ಫಲಕ?
fact check: ಮೆಟ್ರೊ ನಿಲ್ದಾಣದಲ್ಲಿ ಬಿಎಸ್‌ಪಿ ಗೆಲುವಿನ ಫಲಕ?   

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಎಲ್ಲ ಪಕ್ಷಗಳು ಬಿರುಸಿನ ತಯಾರಿ ನಡೆಸುತ್ತಿವೆ. ಆದರೆ ಲಖನೌ ಮೆಟ್ರೊ ನಿಲ್ದಾಣದಲ್ಲಿ ಹಾಕಲಾಗಿದೆ ಎನ್ನಲಾಗಿರುವ ಬಿಎಸ್‌ಪಿ ಫಲಕದ ಚಿತ್ರ ವೈರಲ್ ಆಗಿದೆ. ರಾಜ್ಯದಲ್ಲಿ ಬಿಎಸ್‌ಪಿ ಮುಂದಿನ ಸರ್ಕಾರ ರಚಿಸಲಿದೆ ಎಂದು ಇದರಲ್ಲಿ ಹೇಳಲಾಗಿದೆ. ‘ಬಿಎಸ್‌ಪಿಯ ಆಡಳಿತದಿಂದ ಇಂದಿನಿಂದ ಮಹಿಳೆಯರು ಸುರಕ್ಷಿತವಾಗಿದ್ದಾರೆ’ ಎಂದು ಫಲಕದಲ್ಲಿ ಉಲ್ಲೇಖಿಸಲಾಗಿದೆ. ಈ ಚಿತ್ರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಜನರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ವೈರಲ್ ಆಗಿರುವ ಚಿತ್ರ ತಿರುಚಿದ್ದು ಎಂದು ಲಾಜಿಕಲ್ ಇಂಡಿಯನ್ ಫ್ಯಾಕ್ಟ್ ಚೆಕ್ ವೇದಿಕೆ ತಿಳಿಸಿದೆ. ರಿವರ್ಸ್ ಇಮೇಜ್ ಮೂಲಕ ಪರಿಶೀಲಿಸಿದಾಗ, Llllline.com ಹೆಸರಿನ ವೆಬ್‌ಸೈಟ್‌ನಲ್ಲಿ ಇದೇ ರೀತಿಯ ಚಿತ್ರ ಅಪ್‌ಲೋಡ್ ಆಗಿದೆ. ಈ ವೆಬ್‌ಸೈಟ್, ಇಂತಹ ಡಿಜಿಟಲ್ ಚಿತ್ರಗಳನ್ನು ಮಾರಾಟ ಮಾಡುತ್ತದೆ. ಪಿಕ್‌ಬೆಸ್ಟ್ ಎಂಬ ವೆಬ್‌ಸೈಟ್‌ನಲ್ಲೂ ಇದೇ ರೀತಿಯ ಚಿತ್ರವಿದೆ. ಎಡಿಟಿಂಗ್ ಸಾಫ್ಟ್‌ವೇರ್ ಬಳಸಿ ಈ ಚಿತ್ರವನ್ನು ರಚಿಸಲಾಗಿದ್ದು, ಬಿಎಸ್‌ಪಿ ಈ ಜಾಹೀರಾತು ನೀಡಿಲ್ಲ ಎಂಬುದು ಸ್ಪಷ್ಟಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT