ADVERTISEMENT

ಫ್ಯಾಕ್ಟ್‌ಚೆಕ್ | ಇಮಾಮ್ ಪಾದ ತೊಳೆಯುವಂತೆ ಆಂಧ್ರ ಶಾಸಕ ನರ್ಸ್‌ಗೆ ಸೂಚಿಸಿದ್ದರೇ?

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2020, 19:45 IST
Last Updated 24 ಏಪ್ರಿಲ್ 2020, 19:45 IST
ಫ್ಯಾಕ್ಟ್ ಚೆಕ್
ಫ್ಯಾಕ್ಟ್ ಚೆಕ್   

ಆಂಧ್ರ ಪ್ರದೇಶದ ವೈಎಸ್‌ಆರ್ ಕಾಂಗ್ರೆಸ್‌ನ ಶಾಸಕ ಹಫೀಸ್ ಖಾನ್ ಅವರು ಇಮಾಮ್ ಒಬ್ಬರ ಪಾದ ತೊಳೆಯುವಂತೆ ನರ್ಸ್‌ಗೆ ಸೂಚಿಸಿದ್ದಾರೆ ಎನ್ನಲಾದ ಚಿತ್ರ ಸಾಮಾಜಿಕ ತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಈ ಚಿತ್ರದ ಅಸಲಿಯತ್ತು ಬೇರೆಯೇ ಇದೆ ಎಂದು ಆಲ್ಟ್‌ ನ್ಯೂಸ್ ವರದಿ ಮಾಡಿದೆ.ಇಮಾಮ್ ಪಾದ ತೊಳೆಯುವಂತೆ ನರ್ಸ್‌ಗೆ ಸೂಚಿಸಲಾಗುತ್ತಿದೆ ಎಂಬ ವಾದವನ್ನು ಶಾಸಕರು ಅಲ್ಲಗಳೆದಿದ್ದಾರೆ. ಆ ವ್ಯಕ್ತಿ ಯಾರೆಂದು ತಮಗೆ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದು, ತಮ್ಮ ಫೇಸ್‌ಬುಕ್ ಪುಟದಲ್ಲೂ ಉಲ್ಲೇಖಿಸಿದ್ದಾರೆ. ರಾಯಲಸೀಮಾ ವಿಶ್ವವಿದ್ಯಾಲಯದಲ್ಲಿ ಕ್ವಾರಂಟೈನ್‌ನಲ್ಲಿದ್ದ ವ್ಯಕ್ತಿಯೊಬ್ಬರ ಪಾದಕ್ಕೆ ಗಾಯವಾಗಿ ರಕ್ತ ಸುರಿಯುತ್ತಿತ್ತು. ಕರ್ತವ್ಯದಲ್ಲಿದ್ದ ನರ್ಸ್‌ ಒಬ್ಬರು ಪ್ರಥಮ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಶಾಸಕರು ಕ್ವಾರಂಟೈನ್ ಕೇಂದ್ರದ ಪರಿಶೀಲನೆಗೆಂದು ಅಲ್ಲಿಗೆ ಭೇಟಿ ನೀಡಿದ್ದರು. ಚಿಕಿತ್ಸೆ ನೀಡುತ್ತಿರುವ ದೃಶ್ಯವನ್ನು ಪಾದ ತೊಳೆಯಲಾಗುತ್ತಿದೆ ಎಂದು ತಪ್ಪಾಗಿ ಬಿಂಬಿಸಲಾಗಿದೆ. ಈ ಕುರಿತ ಶಾಸಕರು ಠಾಣೆಗೆ ದೂರನ್ನೂ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT