ADVERTISEMENT

Fact Check: ಅತ್ಯಾಚಾರ, ವಿಡಿಯೊ ಚಿತ್ರೀಕರಣ ಉತ್ತರ ಪ್ರದೇಶದ ಉನ್ನಾವೊದ ಘಟನೆಯೇ?

ಫ್ಯಾಕ್ಟ್ ಚೆಕ್
Published 17 ಆಗಸ್ಟ್ 2025, 19:17 IST
Last Updated 17 ಆಗಸ್ಟ್ 2025, 19:17 IST
<div class="paragraphs"><p>ಫ್ಯಾಕ್ಟ್ ಚೆಕ್: ಅತ್ಯಾಚಾರ, ವಿಡಿಯೊ ಚಿತ್ರೀಕರಣ ಉತ್ತರ ಪ್ರದೇಶದ ಉನ್ನಾವೊದ ಘಟನೆಯೇ? </p></div>

ಫ್ಯಾಕ್ಟ್ ಚೆಕ್: ಅತ್ಯಾಚಾರ, ವಿಡಿಯೊ ಚಿತ್ರೀಕರಣ ಉತ್ತರ ಪ್ರದೇಶದ ಉನ್ನಾವೊದ ಘಟನೆಯೇ?

   

ಸಾಮಾಜಿಕ ಜಾಲತಾಣಗಳಲ್ಲಿ ಆಘಾತಕಾರಿಯಾದ ವಿಡಿಯೊ ಹರಿದಾಡುತ್ತಿದ್ದು, ಮಹಿಳೆಯೊಬ್ಬರನ್ನು ಮೂವರು ಪುರುಷರು ಎಳೆಯುತ್ತಾ, ಕಿರುಕುಳ ನೀಡುತ್ತಿರುವುದು, ತನ್ನನ್ನು ಬಿಟ್ಟುಬಿಡುವಂತೆ ಮಹಿಳೆ ಬೇಡಿಕೊಳ್ಳುವುದು ಅದರಲ್ಲಿ ಸೆರೆಯಾಗಿದೆ. ಉತ್ತರ ಪ್ರದೇಶದ ಉನ್ನಾವೊದಲ್ಲಿ ಇತ್ತೀಚೆಗೆ ಅತ್ಯಾಚಾರ ಘಟನೆ ನಡೆದಿದ್ದು, ಅತ್ಯಾಚಾರ ಮಾಡಿದವರೇ ವಿಡಿಯೊ ಚಿತ್ರೀಕರಿಸಿದ್ದಾರೆ; ಉತ್ತರ ಪ್ರದೇಶದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ ಎಂದು ಪೋಸ್ಟ್ ಹಂಚಿಕೊಳ್ಳುತ್ತಿರುವವರು ಪ್ರತಿಪಾದಿಸುತ್ತಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ; ವಿಡಿಯೊ ಇತ್ತೀಚಿನದ್ದಲ್ಲ.

ಗೂಗಲ್ ಲೆನ್ಸ್‌ ಮೂಲಕ ವಿಡಿಯೊದ ಕೀಫ್ರೇಮ್‌ ಪರಿಶೀಲಿಸಿದಾಗ, ಇದೇ ವಿಡಿಯೊವನ್ನು ಹಲವರು ಹಂಚಿಕೊಂಡಿರುವುದು ಕಂಡಿತು. ‘ದಿ ಕ್ವಿಂಟ್’ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಬಗ್ಗೆ ವರದಿಯಾಗಿದ್ದು, ವಿಡಿಯೊ 2018ರ ಘಟನೆಗೆ ಸಂಬಂಧಿಸಿದ್ದು ಎಂದು ಉಲ್ಲೇಖಿಸಲಾಗಿದೆ. ಗೂಗಲ್‌ನಲ್ಲಿ ನಿರ್ದಿಷ್ಟ ಪದದ ಮೂಲಕ ಹುಡುಕಾಟ ನಡೆಸಿದಾಗ, ಅತ್ಯಾಚಾರ ಪ್ರಕರಣದ ಬಗ್ಗೆ 2018ರ ಜುಲೈ 7ರಂದು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದ್ದು ಕಂಡಿತು. ಇದೇ ವಿಡಿಯೊ ಬಗ್ಗೆ ಉತ್ತರಪ್ರದೇಶದ ಪೊಲೀಸರು ಪ್ರಕಟಣೆಯನ್ನೂ ನೀಡಿದ್ದಾರೆ. ವಿಡಿಯೊ ಅತ್ಯಾಚಾರ ಘಟನೆಗೆ ಸಂಬಂಧಿಸಿದ್ದು ಎನ್ನುವುದು ನಿಜ. ಆದರೆ, ಅದು ಏಳು ವರ್ಷಗಳ ಹಿಂದಿನ ಪ್ರಕರಣ ಎಂದು ಪಿಟಿಐ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.