ಪ್ರಯಾಣಿಕರು ರನ್ವೇಯಲ್ಲಿ ವಿಮಾನವನ್ನು ತಳ್ಳುತ್ತಿರುವ ಚಿತ್ರವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆ ನಡೆದಿರುವುದು ಭಾರತದ ಒಂದು ವಿಮಾನ ನಿಲ್ದಾಣದಲ್ಲಿ ಎಂದು ಹೇಳಲಾಗಿದೆ. ಈ ಚಿತ್ರವನ್ನು ಇರಿಸಿಕೊಂಡು ಕೇಂದ್ರ ಸರ್ಕಾರವನ್ನು ಟೀಕಿಸಲಾಗುತ್ತಿದೆ.‘ನಿಮಗೆ ಇನ್ನೂ ಎಷ್ಟು ಉತ್ತಮ ದಿನಗಳು ಬೇಕು. ಇನ್ನೂ ಎಷ್ಟು ಅಭಿವೃದ್ಧಿ ನಿರೀಕ್ಷಿಸುತ್ತೀರಿ. ವಿಮಾನವನ್ನು ಕೂಡ ಜನರೇ ತಳ್ಳಬೇಕಾದ ಸ್ಥಿತಿ ಬಂದಿದೆ’ ಎಂದು ವ್ಯಂಗ್ಯ ಮಾಡಲಾಗಿದೆ.
ವೈರಲ್ ಆಗಿರುವ ಈ ಚಿತ್ರ ಭಾರತದ್ದಲ್ಲ, ಇದು ನೇಪಾಳದ್ದು ಎಂದು ಲಾಜಿಕಲ್ ಇಂಡಿಯನ್ ವರದಿ ಮಾಡಿದೆ. ನೇಪಾಳದ ಕೋಲ್ತಿ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಈ ವಿಮಾನ ತಾರಾ ಏರ್ಲೈನ್ಸ್ಗೆ ಸೇರಿದೆ. ವಿಮಾನ ನಿಲ್ದಾಣದಲ್ಲಿ ತಪ್ಪು ಜಾಗದಲ್ಲಿಈ ವಿಮಾನವನ್ನು ನಿಲುಗಡೆ ಮಾಡಿದ್ದರು. ಬೇರೆ ವಿಮಾನಗಳಿಗೆ ಸ್ಥಳಾವಕಾಶ ಮಾಡಿಕೊಡುವ ಕಾರಣ ಅದನ್ನು ಪ್ರಯಾಣಿಕರೇ ರನ್ವೇ ಆಚೆ ತಳ್ಳಿದ್ದರು. ಈ ಕುರಿತು ಎನ್ಡಿ ಟಿವಿ ಮತ್ತು ನವಭಾರತ ಟೈಮ್ಸ್ ಡಿ.2ರಂದು ವರದಿ ಮಾಡಿದ್ದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.