ADVERTISEMENT

ಫ್ಯಾಕ್ಟ್‌ ಚೆಕ್‌: ವೈರಲ್‌ ಆಗಿರುವ ವಿಡಿಯೊ ಅಮರಾವತಿಗೆ ಸಂಬಂಧಿಸಿದ್ದಲ್ಲ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2021, 18:35 IST
Last Updated 17 ನವೆಂಬರ್ 2021, 18:35 IST
   

ಮಸೀದಿಯ ಮುಂದೆ ದೊಡ್ಡ ಸಮೂಹವೊಂದು ಕೇಸರಿ ಧ್ವಜ ಬೀಸುತ್ತಾ ಜೈ ಶ್ರೀರಾಮ್‌ ಎಂಬ ಘೋಷಣೆ ಕೂಗುತ್ತಿರುವ ವಿಡಿಯೊವೊಂದು ವೈರಲ್ ಆಗಿದೆ. ಮಹಾರಾಷ್ಟ್ರದ ಅಮರಾವತಿಯಲ್ಲಿ ಮುಸ್ಲಿಂ ಸಂಘಟನೆಗಳುಆಯೋಜಿಸಿದ್ದ ರ‍್ಯಾಲಿ ವಿರೋಧಿಸಿ ಬಿಜೆಪಿ ಬಂದ್‌ಗೆ ಕರೆ ನೀಡಿತ್ತು. ವೈರಲ್‌ ಆಗಿರುವ ವಿಡಿಯೊ ಬಿಜೆಪಿ ನಡೆಸಿದ ಪ್ರತಿಭಟನೆಯದ್ದು ಎಂದು ಈ ವಿಡಿಯೊವನ್ನು ಬಿಂಬಿಸಲಾಗಿದೆ. ಪ್ರತಿಭಟನೆ ಬಳಿಕ ಅಮರಾವತಿಯಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ ಎಂದು ಹೇಳಲಾಗಿದೆ.

ಈ ವಿಡಿಯೊ ಕುರಿತು ಸುಳ್ಳು ಮಾಹಿತಿ ವೈರಲ್‌ ಆಗಿದೆ ಎಂದು ಲಾಜಿಕಲ್‌ ಇಂಡಿಯನ್‌ ವರದಿ ಮಾಡಿದೆ. 2019ರಲ್ಲಿಕರ್ನಾಟಕದ ಕಲಬುರಗಿಯಲ್ಲಿ ನಡೆದಿದ್ದ ರಾಮನವಮಿ ಮೆರವಣಿಗೆಯ ವಿಡಿಯೊ ಇದಾಗಿದೆ. 2019ರ ಏ.13ರಂದು ಈ ಕುರಿತು ಎಎನ್‌ಐ ಸುದ್ದಿ ಸಂಸ್ಥೆ ಟ್ವೀಟ್‌ ಮಾಡಿದೆ. ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವರಿಗೆ ಮುಸ್ಲಿಮರು ಪಾನಕ ಹಂಚಿರುವ ಕುರಿತೂ ಎಎನ್‌ಐ ಇದೇ ಟ್ವೀಟ್‌ನಲ್ಲಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT