ADVERTISEMENT

FactCheck: ಲಸಿಕೆ ವಿತರಣೆ; ಸಂಭ್ರಮಾಚರಣೆಗಾಗಿ ಸರ್ಕಾರದಿಂದಲೇ ಉಚಿತ ಇಂಟರ್ನೆಟ್?

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2021, 19:30 IST
Last Updated 13 ಡಿಸೆಂಬರ್ 2021, 19:30 IST
   

ಕೋವಿಡ್‌–19 ತಡೆಗೆದೇಶದಲ್ಲಿ ದಾಖಲೆ ಮಟ್ಟದಲ್ಲಿ ಲಸಿಕೆ ನೀಡಲಾಗಿದೆ. ಈ ಸಂಭ್ರಮ ಆಚರಿಸಲು ಸರ್ಕಾರ ಮೂರು ತಿಂಗಳು ಉಚಿತ ಇಂಟರ್‌ನೆಟ್‌ ಸಂಪರ್ಕ ನೀಡಲಿದೆ ಎಂಬ ಮಾಹಿತಿಯೊಂದು ಹರಿದಾಡುತ್ತಿದೆ. ನಿಮ್ಮ ಬಳಿ ರಿಲಯನ್ಸ್‌ ಜಿಯೊ, ಏರ್‌ಟೆಲ್‌ ಅಥವಾ ವಿ ಮೊಬೈಲ್‌ ಸಂಪರ್ಕ ಇದ್ದರೆ ನೀವು ಈ ಕೊಡುಗೆ ಪಡೆಯಬಹುದು ಎನ್ನಲಾಗಿದೆ. ಜೊತೆಗೆ ಒಂದು ಲಿಂಕ್‌ ಅನ್ನು ಕೂಡಾ ನೀಡಲಾಗಿದೆ. ಈ ಲಿಂಕ್‌ ಬಳಸಿ ಇಂಟರ್‌ನೆಟ್‌ ರೀಚಾರ್ಜ್‌ ಮಾಡಬಹುದು ಎಂದು ಹೇಳಲಾಗಿದೆ.

ಈ ರೀತಿಯ ಕೊಡುಗೆಯನ್ನು ನೀಡುತ್ತಿಲ್ಲ ಎಂದು ಸರ್ಕಾರವೇ ಖಚಿತಪಡಿಸಿದೆ. ಜೊತೆಗೆ ಈ ಕೊಡುಗೆ ಪಡೆಯುವ ಸಲುವಾಗಿ ತಮ್ಮ ಬ್ಯಾಂಕ್‌ ಖಾತೆ ವಿವರ ಸೇರಿ ಯಾವುದೇ ವೈಯಕ್ತಿಕ ವಿವರಗಳನ್ನು ಯಾರೊಡನೆಯೂ ಅಥವಾ ಯಾವ ಲಿಂಕ್‌ನಲ್ಲಿಯೂ ಹಂಚಿಕೊಳ್ಳಬೇಡಿ ಎಂದು ಜನರಿಗೆ ಹೇಳಿದೆ. ಸರ್ಕಾರದ ಪಿಐಬಿ ಫ್ಯಾಕ್ಟ್‌ಚೆಕ್‌ ಟ್ವಿಟರ್‌ ಖಾತೆಯಲ್ಲಿ ಈ ಕುರಿತು ಮಾಹಿತಿ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT