ADVERTISEMENT

ಗಾಂಧಿ ಕುಟುಂಬ ಅಸಲಿಗೆ ಮೊಹಮ್ಮದ್‌ ಗಾಜಿ ಕುಟುಂಬ ಎನ್ನುವುದು ಸುಳ್ಳು ಸುದ್ದಿ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2023, 23:30 IST
Last Updated 4 ಅಕ್ಟೋಬರ್ 2023, 23:30 IST
fact check
fact check   

‘ಸತ್ಯವನ್ನು ಎಷ್ಟೇ ಮುಚ್ಚಿಟ್ಟರೂ ಅದು ಹೊರಬರುತ್ತದೆ. ಇದು ರಾಜೀವ್‌ ಗಾಂಧಿ ಮತ್ತು ಸೋನಿಯಾ ಗಾಂಧಿಯವರ ನಿಜವಾದ ಛಾಯಾಚಿತ್ರ. ಈ ನಕಲಿ ಗಾಂಧಿ ಕುಟುಂಬವು ವಾಸ್ತವವಾಗಿ ಮೊಹಮ್ಮದ್‌ ಗಾಜಿಯ ಕುಟುಂಬವಾಗಿದೆ. ಈ ಫೋಟೊವನ್ನು 10 ಜನರಿಗೆ ಕಳುಹಿಸಿ, ದೇಶವನ್ನು ಜಾಗೃತಗೊಳಿಸಿ ಮತ್ತು ಭಾರತವನ್ನು ಪಾಕಿಸ್ತಾನವಾಗಿ ಬದಲಾಗದಂತೆ ರಕ್ಷಿಸಿ’ ಎಂಬ ಬರಹವಿರುವ ಪೋಸ್ಟ್‌ವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ, ಇದು ತಿರುಚಿದ ಮಾಹಿತಿ ಇರುವ ಸುದ್ದಿಯಾಗಿದೆ.

ರಾಜೀವ್‌ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರು ಹಿಂದೂ ಸಂಪ್ರದಾಯದಂತೆ 1968ರ ಫೆ.25ರಂದು ಮದುವೆ ಆಗಿದ್ದಾರೆ. ಮಾರನೆಯ ದಿನ ‘ದಿ ಇಂಡಿಯನ್‌ ಎಕ್ಸ್‌ಪ್ರೆಸ್‌’ ಸೇರಿದಂತೆ ಹಲವು ಪತ್ರಿಕೆಗಳು ಈ ಬಗ್ಗೆ ಫೋಟೊ ಸಹಿತ ವರದಿ ಪ್ರಕಟಿಸಿವೆ. ಕಾಂಗ್ರೆಸ್‌ ವೆಬ್‌ಸೈಟ್‌ ಹಾಗೂ ‘ಇಂದಿರಾ ಗಾಂಧಿ: ಆ್ಯನ್‌ ಇಂಟಿಮೇಟ್‌ ಬಿಯೋಗ್ರಫಿ’ ಎನ್ನುವ ಪುಸ್ತಕದಲ್ಲಿಯೂ ಈ ವಿಷಯ ಪ್ರಸ್ತಾಪವಾಗಿದೆ. ಇನ್ನು ಈ ಚಿತ್ರದಲ್ಲಿ ಇರುವುದು ರಾಜೀವ್‌ ಹಾಗೂ ಸೋನಿಯಾ ಗಾಂಧಿ ಅವರೇ ಆಗಿದ್ದಾರೆ. ಮದುವೆಯ ನಂತರ ಫ್ಯಾನ್ಸಿಡ್ರೆಸ್‌ ಪಾರ್ಟಿಯನ್ನು ಆಯೋಜಿಸಲಾಗಿತ್ತು. ಆ ವೇಳೆ ಈ ಇಬ್ಬರೂ, ಮುಸ್ಲಿಂ ಸಮುದಾಯದವರು ತೊಡುವ ವೇಷ ಧರಿಸಿದ್ದರು. ಇದೇ ಸಂದರ್ಭದ ಮತ್ತೊಂದು ಫೋಟೊ ‘ಇಂಡಿಯನ್‌ ಕಲ್ಚರ್‌’ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಇದು ಫ್ಯಾನ್ಸಿಡ್ರೆಸ್‌ ಪಾರ್ಟಿಯ ಫೋಟೊ ಎಂದು ಕ್ಯಾಪ್ಷನ್‌ನಲ್ಲಿ ಬರೆಯಲಾಗಿದೆ. ಆದ್ದರಿಂದ, ಗಾಂಧಿ ಕುಟುಂಬವು ಗಾಜಿಯ ಕುಟುಂಬ ಎನ್ನುವುದು ಸುಳ್ಳು ಸುದ್ದಿ ಎಂದು ‘‌ದಿ ಕ್ವಿಂಟ್‌’ ಫ್ಯಾಕ್ಟ್‌ಚೆಕ್‌ ಪ್ರಕಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT