ADVERTISEMENT

ಫ್ಯಾಕ್ಟ್‌ ಚೆಕ್‌; ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಮೋದಿ ವಿರುದ್ಧ ಪ್ರತಿಭಟಿಸಿದರೇ?

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2021, 19:34 IST
Last Updated 25 ಅಕ್ಟೋಬರ್ 2021, 19:34 IST
ಫ್ಯಾಕ್ಟ್‌ ಚೆಕ್‌
ಫ್ಯಾಕ್ಟ್‌ ಚೆಕ್‌   

ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಒಂದು ಗುಂಪಿನ ಜೊತೆ ನೆಲದ ಮೇಲೆ ಕುಳಿತು ಜನಪ್ರಿಯ ‘ಮೆಹಂಗಾಯಿ ದಯಾ ಖಯಾತ್‌ ಜಾತ್‌ ಹೈ’ ಹಾಡು ಹಾಡುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗಿದೆ. ಶಿವರಾಜ್‌ ಸಿಂಗ್‌ ತಮ್ಮ ಬೆಂಬಲಿಗರ ಜೊತೆ ಸೇರಿ ಹಣದುಬ್ಬರದ ವಿರುದ್ಧ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಈ ವಿಡಿಯೊವನ್ನು ಬಿಂಬಿಸಲಾಗುತ್ತಿದೆ.

ಈ ವಿಡಿಯೊವನ್ನು ತಿರುಚಲಾಗಿದೆ ಎಂದು ಲಾಜಿಕಲ್‌ ಇಂಡಿಯನ್‌ ವರದಿ ಮಾಡಿದೆ. ಅ.20 ಈ ವಿಡಿಯೊ ಚಿತ್ರೀಕರಿಸಲಾಗಿದೆ. ಮಧ್ಯಪ್ರದೇಶದ ಪನ್ನಾದ ಶ್ರೀ ಜಗದೀಶ್‌ ಸ್ವಾಮಿ ಮಂದಿರಕ್ಕೆ ಅವರು ಕುಟುಂಬದ ಜೊತೆ ಭೇಟಿ ನೀಡಿದ್ದರು. ಆಗ ಸಾಮಾನ್ಯ ಜನರ ಜೊತೆ ಕುಳಿತು ಕೀರ್ತನೆ ಮತ್ತು ಭಜನೆಗಳನ್ನು ಹಾಡಿದ್ದರು. ಈ ಕುರಿತು ಸ್ವತಃ ಅವರೇ ಟ್ವೀಟ್‌ ಕೂಡಾ ಮಾಡಿದ್ದರು. ಭಜನೆಗಳ ಜಾಗದಲ್ಲಿ ‘ಮೆಹಂಗಾಯಿ’ ಹಾಡನ್ನು ಸಾಫ್ಟ್‌ವೇರ್‌ ಬಳಸಿ ಸೇರಿಸಲಾಗಿದೆ ಎಂದು ಲಾಜಿಕಲ್‌ ಇಂಡಿಯನ್‌ ವರದಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT