ಕೋವಿಡ್ ಸಂಕಷ್ಟದ ಪರಿಸ್ಥಿತಿಯಲ್ಲಿ ಆನ್ಲೈನ್ ಪರೀಕ್ಷೆಯೊಂದೇ ಪರಿಹಾರ. ಈ ನಿಟ್ಟಿನಲ್ಲಿ ವಿಎಚ್ ಸಾಫ್ಟ್ವೇರ್ ಕಂಪನಿಯು ಅಭಿವೃದ್ಧಿಪಡಿಸಿರುವ ಆ್ಯಪ್ ಪರೀಕ್ಷೆಗೊಳಪಟ್ಟಿದೆ. ಈ ಆ್ಯಪ್ ಅನ್ನು ಎಲ್ಲ ಶಾಲೆಗಳು ಖರೀದಿಸಿ, ಮುಂಬರುವ ಆನ್ಲೈನ್ ಪರೀಕ್ಷೆಗಳನ್ನು ನಡೆಸಬಹುದು ಎಂದು ಸಿಬಿಎಸ್ಇ ಸೂಚಿಸಿದೆ. ಈ ಯೋಜನೆಯ ಒಎಸ್ಡಿ ಆಗಿ ಡಾ. ಸಹೀಲ್ ಗೆಹ್ಲೋಟ್ ಅವರನ್ನು ನೇಮಿಸಲಾಗಿದೆ ಎಂಬ ಸಂದೇಶ ಚರ್ಚೆಯಾಗುತ್ತಿದೆ.
ಆನ್ಲೈನ್ ಪರೀಕ್ಷೆ ಹಾಗೂ ಆ್ಯಪ್ ಖರೀದಿ ಸಂದೇಶವು ದಾರಿ ತಪ್ಪಿಸುವಂತದ್ದು ಎಂದು ಸಿಬಿಎಸ್ಇ ಸ್ಪಷ್ಟನೆ ನೀಡಿದೆ. ಆ್ಯಪ್ ಖರೀದಿಸುವಂತೆ ಯಾವ ಕಂಪನಿಯನ್ನೂಸಿಬಿಎಸ್ಇ ಶಿಫಾರಸು ಮಾಡಿಲ್ಲ. ಈ ಸಂಬಂಧ ಯಾವುದೇ ಆದೇಶ ಹೊರಡಿಸಿಲ್ಲ. ಸಂಯೋಜಕರಾಗಿ ಯಾವ ಅಧಿಕಾರಿಯನ್ನೂ ನೇಮಿಸಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.