ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಸಮಾಜವಾದಿ ಪಕ್ಷದ (ಎಸ್‌ಪಿ) ನಡುವೆ ಬಿರುಸಿನ ಪೈಪೋಟಿ ನಡೆಯುತ್ತಿರುವ ವೇಳೆಯೇ, ಎಸ್‌ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಮಾಡಿದ್ದಾರೆ ಎನ್ನಲಾದ ಟ್ವೀಟ್‌ಭಾರಿ ವೈರಲ್ ಆಗಿದೆ. ‘ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ ರಾಮ ಮಂದಿರದ ಜಾಗದಲ್ಲಿ ಬಾಬರಿ ಮಸೀದಿ ಕಟ್ಟುತ್ತೇವೆ ಎಂದು ನಾವು ಮುಸ್ಲಿಂ ಸಹೋದರರಿಗೆ ಭರವಸೆ ನೀಡುತ್ತೇವೆ’ ಎಂದು ಅಖಿಲೇಶ್ ಟ್ವೀಟ್ ಮಾಡಿದ್ದಾರೆ ಎಂದು ಬಿಂಬಿಸಲಾಗಿದೆ. ಬಿಜೆಪಿ ಫಾರ್ ನ್ಯೂ ಇಂಡಿಯಾ ಸೇರಿ ಹಲವಾರು ಪೇಜ್‌ಗಳಲ್ಲಿ ಈ ಟ್ವೀಟ್ ಅತಿ ಹೆಚ್ಚು ಬಾರಿ ಶೇರ್ ಆಗಿದೆ.
ಅಖಿಲೇಶ್ ಯಾದವ್ ಈ ಟ್ವೀಟ್ ಮಾಡಿಲ್ಲ ಎಂದು ಆಲ್ಟ್ ನ್ಯೂಸ್ ವೇದಿಕೆ ವರದಿ ಮಾಡಿದೆ. ಅಖಿಲೇಶ್ ಅವರ ಟ್ವಿಟರ್ ಟೈಮ್‌ಲೈನ್‌ನಲ್ಲಿ ಈ ಟ್ವೀಟ್ ಇಲ್ಲ. ಇದನ್ನು ಅಳಿಸಲಾಗಿದೆಯೇ ಎಂದು ತಿಳಿಯಲು ಆರ್‌ಖೈವ್ ವೆಬ್‌ಸೈಟ್‌ನಲ್ಲಿ ಹುಡುಕಾಡಲಾಯಿತು. ಅಲ್ಲಿ ಕೂಡಾ ಈ ಟ್ವೀಟ್ ಸಿಗಲಿಲ್ಲ. ಅಖಿಲೇಶ್ ಅವರು ಮಾಡಿದ್ದ ಟ್ವೀಟ್‌ನ ಸ್ಕ್ರೀನ್‌ಶಾಟ್ ಅನ್ನು ತೆಗೆದುಕೊಂಡು ಅದನ್ನು ಎಡಿಟಿಂಗ್ ಮೂಲಕ ತಿರುಚಿರುವುದು ವೈರಲ್ ಆಗಿರುವ ಟ್ವೀಟ್‌ಅಲ್ಲಿ ಸ್ಪಷ್ಟವಾಗಿ ತಿಳಿಯುತ್ತದೆ ಎಂದು ಆಲ್ಟ್ ನ್ಯೂಸ್ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.