ADVERTISEMENT

ಅಂಬೇಡ್ಕರ್‌ಗೆ ‘ಅಪಮಾನ’: ಹಂಗಾಮಿ ಕುಲಸಚಿವೆ ಅಮಾನತು

ಪಿಟಿಐ
Published 16 ಜೂನ್ 2018, 19:13 IST
Last Updated 16 ಜೂನ್ 2018, 19:13 IST

ಔರಂಗಾಬಾದ್‌ : ಅಂಬೇಡ್ಕರ್‌ ಅವರ ಹೆಸರಿನ ಜತೆ ‘ಮಹಾರಾಜ’ ಪದವನ್ನು ಸೇರಿಸಿದ ಆರೋಪಕ್ಕೆ ಸಂಬಂಧಿಸಿದಂತೆ, ಡಾ. ಬಾಬಾಸಾಹೇಬ್‌ ಅಂಬೇಡ್ಕರ್‌ ಮರಾಠವಾಡ ವಿಶ್ವವಿದ್ಯಾಲಯದ ಹಂಗಾಮಿ ಕುಲಸಚಿವೆ ಸಾಧನಾ ಪಾಂಡೆ ಅವರನ್ನು ಅಮಾನತುಗೊಳಿಸಲಾಗಿದೆ.

ವಿಶ್ವವಿದ್ಯಾಲಯದ ಸೆನೆಟ್‌ ಸದಸ್ಯರ ಸಭೆಯಲ್ಲಿ ಕುಲಪತಿ ಬಿ.ಎ.ಛೋಪ್ಡೆ ಅವರು ಸಾಧನಾ ಅವರ ವಿರುದ್ಧ ಈ ಕ್ರಮ ಕೈಗೊಂಡರು.

ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಚುನಾವಣೆ ಕುರಿತು ಚರ್ಚಿಸಲು ಸಭೆ ಕರೆಯಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಸಾಧನಾ, ಅಂಬೇಡ್ಕರ್‌ ಅವರನ್ನು ಹೀಗೆ ಸಂಬೋಧಿಸಿದಾಗ ಸಭೆಯಲ್ಲಿ ಗದ್ದಲ ಉಂಟಾಯಿತು.

ADVERTISEMENT

‘ಸಾಧನಾ ಅವರು ಬಲಪಂಥೀಯ ಸಿದ್ಧಾಂತದವರಾಗಿದ್ದು, ದಲಿತ ನಾಯಕನ ಹೆಸರಿಗೆ ದುರುದ್ದೇಶದಿಂದಲೇ ಮಹಾರಾಜ ಪದ ಸೇರಿಸಿದ್ದಾರೆ. ಹೀಗಾಗಿ ಅವರನ್ನು ಅಮಾನತು ಮಾಡಬೇಕು’ ಎಂದು ಸೆನೆಟ್‌ ಸದಸ್ಯರು ಆಗ್ರಹಿಸಿದರು.

ನಂತರ ಕುಲಪತಿ ಛೋಪ್ಡೆ, ಸಾಧನಾ ಅವರನ್ನು ಸಭೆಯಿಂದ ಹೊರ ನಡೆಯುವಂತೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.