ADVERTISEMENT

ಅಕ್ರಮ ಮರಳು ಸಾಗಣೆಯ ತನಿಖಾ ವರದಿ ಮಾಡುತ್ತಿದ್ದ ಪತ್ರಕರ್ತನ ಶಂಕಾಸ್ಪದ ಸಾವು

ಏಜೆನ್ಸೀಸ್
Published 26 ಮಾರ್ಚ್ 2018, 10:35 IST
Last Updated 26 ಮಾರ್ಚ್ 2018, 10:35 IST
ಪತ್ರಕರ್ತ ಸಂದೀಪ್‌ ಶರ್ಮಾ   – ಎಎನ್‌ಐ ಚಿತ್ರ
ಪತ್ರಕರ್ತ ಸಂದೀಪ್‌ ಶರ್ಮಾ – ಎಎನ್‌ಐ ಚಿತ್ರ   

ಭಿಂಡ್‌: ಮಧ್ಯಪ್ರದೇಶದ ಭಿಂಡ್‌ ಜಿಲ್ಲೆಯಲ್ಲಿನ ಅಕ್ರಮ ಮರಳು ಸಾಗಣೆ ಪ್ರಕರಣಗಳ ಕುರಿತು ತನಿಖಾ ವರದಿಗಳನ್ನು ಮಾಡುತ್ತಿದ್ದ ಪತ್ರಕರ್ತ ಸಂದೀಪ್‌ ಶರ್ಮಾ ಮೇಲೆ ಟ್ರಕ್‌ವೊಂದು ಸೋಮವಾರ ಅನುಮಾನಾಸ್ಪದವಾಗಿ ಹರಿದಿದೆ. ಇದರಿಂದಾಗಿ ಸಂದೀಪ್‌ ಮೃತಪಟ್ಟಿದ್ದಾರೆ.

ರಾಷ್ಟ್ರೀಯ ವಾರ್ತಾ ವಾಹಿನಿಯೊಂದರಲ್ಲಿ ಸಂದೀಪ್‌ ಕಾರ್ಯನಿರ್ವಹಿಸುತ್ತಿದ್ದರು.  ಮರಳಿನ ಅಕ್ರಮಗಳಲ್ಲಿ ಪೊಲೀಸ್‌ ಅಧಿಕಾರಿಯೊಬ್ಬರು ಶಾಮಿಲಾಗಿದ್ದಾರೆಂದು ಆರೋಪಿಸಿ ಸಂದೀಪ್‌ ಸುದ್ದಿಯೊಂದನ್ನು ಕಲೆಹಾಕಿದ್ದರು. ಅದರಲ್ಲಿ ಪೊಲೀಸ್‌ ಅಧಿಕಾರಿಯು ಅಕ್ರಮಕ್ಕೆ ಅನುವು ಮಾಡಿಕೊಡುವ ಫೋನ್‌ ಸಂಭಾಷಣೆ ಇತ್ತು. ಆ ಸುದ್ದಿ ಪ್ರಸಾರದ ಬಳಿಕ ಅಧಿಕಾರಿಯನ್ನು ವರ್ಗಾವಣೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT