ನವದೆಹಲಿ (ಪಿಟಿಐ): ಗೃಹ ಬಳಕೆ ಅನಿಲ ಸಿಲಿಂಡರ್ (ಎಲ್ಪಿಜಿ) ಬೆಲೆ ರೂ 3.46 ಏರಿಕೆಯಾಗಿದೆ. ವಿತರಕರಿಗೆ ನೀಡುವ ಕಮಿಷನ್ ಶೇ 9ರಷ್ಟು ಏರಿಸಿರುವ ಹಿನ್ನೆಲೆಯಲ್ಲಿ ಸರ್ಕಾರ ಸಿಲಿಂಡರ್ ಬೆಲೆ ಏರಿಕೆ ಮಾಡಿದೆ.
ಈ ದರ ಮಂಗಳವಾರದಿಂದಲೇ ಅನ್ವಯವಾಗಲಿದೆ. ವಿತರಕರಿಗೆ 14.2 ಕಿಲೋ ಸಿಲಿಂಡರ್ಗೆ ನೀಡಲಾಗುತ್ತಿರುವ ಕಮಿಷನನ್ನು ರೂ 3.46 ಹೆಚ್ಚಿಸಲಾಗಿದೆ. ಗೃಹ ಬಳಕೆ ಅನಿಲ ಸಿಲಿಂಡರ್ ಬೆಲೆಯನ್ನು ಅದೇ ಪ್ರಮಾಣದಲ್ಲಿ ಏರಿಕೆ ಮಾಡಲಾಗಿದೆ ಎಂದು ತೈಲ ಸಚಿವಾಲಯ ತಿಳಿಸಿದೆ.
ಹೆಚ್ಚಿಸಲಾದ ಕಮಿಷನ್ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸಲಾಗಿದೆ. ಇದು ಮಂಗಳವಾರದಿಂದಲೇ ಜಾರಿಗೆ ಬರಲಿದೆ.
ಇದರಿಂದ ಪ್ರತಿ ಸಿಲಿಂಡರ್ಗೆ ವಿತರಕರಿಗೆ ನೀಡುವ ಕಮಿಷನ್ ಹಣ 40.71 ರೂಪಾಯಿ ಆಗುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.