ಪುಣೆ (ಪಿಟಿಐ): `ಅಣ್ಣಾ ಹಜಾರೆ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದ್ದು, ಇದೇ ಸ್ಥಿತಿ ಮುಂದುವರಿದರೆ ಭಾನುವಾರ ಅವರನ್ನು ಮನೆಗೆ ಕಳುಹಿಸಲಾಗುತ್ತದೆ~ ಎಂದು ವೈದ್ಯರು ತಿಳಿಸಿದ್ದಾರೆ. `ಶ್ವಾಸಕೋಶದ ಸೋಂಕಿಗೆ ಒಳಗಾಗಿದ್ದ ಅಣ್ಣಾ ಅವರ ಶ್ವಾಸಕೋಶದ ಎಕ್ಸ್ರೇ ಮತ್ತು ರಕ್ತದ ಪರಿಶೋಧನೆ ನಡೆಸಲಾಗಿದೆ. ಅವು ಸಹಜ ಸ್ಥಿತಿಯಲ್ಲಿವೆ~ ಎಂದು ಡಾ. ಪರಾಗ್ ಸಂಚೇತಿ ತಿಳಿಸಿದ್ದಾರೆ.
ಅಣ್ಣಾ ಅವರಿಗೆ ಸಂಪೂರ್ಣ ವಿಶ್ರಾಂತಿಯ ಅಗತ್ಯ ಇರುವುದರಿಂದ, ಸಂದರ್ಶಕರ ಭೇಟಿಗೆ ನಿಬರ್ಂಧ ವಿಧಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.