ADVERTISEMENT

ಅತ್ಯಾಚಾರಿಗೆ ಮರಣದಂಡನೆ: ಸುಪ್ರೀಂಕೋರ್ಟ್‌ ತಡೆ

ಪಿಟಿಐ
Published 29 ಮೇ 2018, 19:30 IST
Last Updated 29 ಮೇ 2018, 19:30 IST
ಅತ್ಯಾಚಾರಿಗೆ ಮರಣದಂಡನೆ: ಸುಪ್ರೀಂಕೋರ್ಟ್‌ ತಡೆ
ಅತ್ಯಾಚಾರಿಗೆ ಮರಣದಂಡನೆ: ಸುಪ್ರೀಂಕೋರ್ಟ್‌ ತಡೆ   

ನವದೆಹಲಿ: ಹನ್ನೊಂದು ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ, ಕೊಲೆ ಮಾಡಿದ್ದ ಅಪರಾಧಿಗೆ ಹೈಕೋರ್ಟ್‌ ನೀಡಿದ್ದ ಮರಣದಂಡನೆ ಶಿಕ್ಷೆಗೆ ಸುಪ್ರೀಂಕೋರ್ಟ್‌ ಮಂಗಳವಾರ ತಡೆ ನೀಡಿದೆ.

ನ್ಯಾಯಾಧೀಶರಾದ ಎಲ್. ನಾಗೇಶ್ವರ ರಾವ್‌ ಹಾಗೂ ಮೋಹನ್‌ ಎಂ. ಶಾಂತನಗೌಡರ ಅವರನ್ನು ಒಳಗೊಂಡ ಪೀಠ ತಡೆ ನೀಡಿದ್ದು, ಈ ಸಂಬಂಧ ಮಧ್ಯಪ್ರದೇಶ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದೆ.

ಹೈಕೋರ್ಟ್‌ ನೀಡಿದ್ದ ಮರಣದಂಡನೆ ಆದೇಶದ ವಿರುದ್ಧ  ಅಪರಾಧಿ ಸತೀಶ್‌ ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದರು. ಸತೀಶ್‌ ಜೊತೆಗೆ ಇದೇ ಪ್ರಕರಣದಲ್ಲಿ, ಭಗವಾನಿ ಎಂಬುವನಿಗೆ ನೀಡಿದ್ದ ಮರಣದಂಡನೆ ಶಿಕ್ಷೆಗೂ ಕಳೆದ ವಾರ ಸುಪ್ರೀಂಕೋರ್ಟ್‌ ತಡೆ ನೀಡಿತ್ತು.

ADVERTISEMENT

ಇವರಿಬ್ಬರಿಗೂ ಮರಣದಂಡನೆ ವಿಧಿಸಿದ್ದ ಅಧೀನ ನ್ಯಾಯಾಲಯದ ತೀರ್ಪನ್ನು ಮಧ್ಯಪ್ರದೇಶ ಹೈಕೋರ್ಟ್‌ ಎತ್ತಿ ಹಿಡಿದಿತ್ತು. ಕಳೆದ ವರ್ಷ ಏಪ್ರಿಲ್‌ 14–15ರ ರಾತ್ರಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದರು ಎಂಬ ಅಂಶ ಪೊಲೀಸರ ನಡೆಸಿದ ವಿಚಾರಣೆಯಿಂದ ಬೆಳಕಿಗೆ ಬಂದಿತ್ತು. ಆದರೆ, ಇಬ್ಬರೂ ತಮ್ಮ ವಿರುದ್ಧದ ಆರೋಪವನ್ನು ಅಲ್ಲಗಳೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.