ADVERTISEMENT

ಅತ್ಯಾಚಾರಿ ಸಂಸದ, ಶಾಸಕರು

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2012, 19:59 IST
Last Updated 20 ಡಿಸೆಂಬರ್ 2012, 19:59 IST
ನವದೆಹಲಿ (ಐಎಎನ್‌ಎಸ್): ವಿವಿಧ ರಾಜ್ಯಗಳ ಹಾಲಿ ಇಬ್ಬರು ಸಂಸದರು ಹಾಗೂ ಆರು ಜನ ಶಾಸಕರು ಮಹಿಳೆಯರ ಮೇಲಿನ ಅತ್ಯಾಚಾರ ಆರೋಪಗಳನ್ನು ಎದುರಿಸುತ್ತಿದ್ದರೂ, ಈ ಎಲ್ಲರಿಗೂ ವಿವಿಧ ರಾಜಕೀಯ ಪಕ್ಷಗಳು ಟಿಕೆಟ್ ನೀಡಿದ್ದವು ಎಂದು ಚಿಂತಕರ ಚಾವಡಿಯೊಂದು ಕಳವಳ ವ್ಯಕ್ತಪಡಿಸಿದೆ.

ಪ್ರಜಾಸತ್ತಾತ್ಮಕ ಸುಧಾರಣೆಗಳ ಒಕ್ಕೂಟ ಈ ಸಂಬಂಧ ಅಂಕಿಂಶಗಳನ್ನು ಒಳಗೊಂಡ ಮಾಹಿತಿ ನೀಡಿದ್ದು, ಮಹಿಳೆಯರ ಮೇಲಿನ ದೌರ್ಜನ್ಯದ ಆರೋಪಗಳ ನಡುವೆಯೂ ವಿವಿಧ ರಾಜ್ಯಗಳಲ್ಲಿ ಬಿಜೆಪಿ, ಕಾಂಗ್ರೆಸ್, ಎಸ್‌ಪಿ ಹಾಗೂ ಬಿಎಸ್‌ಪಿ ಪಕ್ಷಗಳು ಅತ್ಯಾಚಾರಿಗಳಿಗೆ ಟಿಕೆಟ್ ನೀಡಿದ್ದವು.
 
ತ.ನಾಡಿನ ಸೇಲಂ ಸಂಸದ ಎಸ್. ಸೆಮ್ಮಲಾಯಿ ಹಾಗೂ ಪ. ಬಂಗಾಳದ ತಮಲುಕ್ ಸಂಸದ ಸುವೆಂದು ಅಧಿಕಾರಿ ಅವರ ಮೇಲೆ ಮಾನಭಂಗದ ಆರೋಪಗಳಿವೆ. ಇದಲ್ಲದೆ 36 ಜನ ಶಾಸಕರ ವಿರುದ್ಧ ಹಲ್ಲೆ ಆರೋಪಗಳಿವೆ. ಅತಿ ಹೆಚ್ಚು ಅಪರಾಧ ಆರೋಪಗಳನ್ನು ಎದುರಿಸುತ್ತಿರುವ ಶಾಸಕರಿರುವುದು ಉ.ಪ್ರದೇಶದಲ್ಲಿ ನಂತರದ ಸ್ಥಾನ ಒಡಿಶಾ ಹಾಗೂ ಪ. ಬಂಗಾಳಗಳದ್ದು ಎಂದು ತಿಳಿಸಲಾಗಿದೆ.
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.