ADVERTISEMENT

ಅತ್ಯಾಚಾರ: ರೆಸಾರ್ಟ್‌ನ ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2013, 19:30 IST
Last Updated 3 ಡಿಸೆಂಬರ್ 2013, 19:30 IST

ತಿರುವನಂತಪುರ (ಪಿಟಿಐ): ಕಳೆದ ತಿಂಗಳು ಇಲ್ಲಿನ ಪೊಳಿಯೂರಿ ರೆಸಾರ್ಟ್‌ನಲ್ಲಿ ಬೆಂಗಳೂರು ಮೂಲದ ಸಾಫ್ಟ್‌ವೇರ್‌ ಉದ್ಯೋಗಿ ಮೇಲೆ ಅತ್ಯಾಚಾರ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ರೆಸಾರ್ಟ್‌ನ ಇಬ್ಬರು ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಅಸ್ಸಾಂನ ಜೊರ್ಹತ್‌ ಜಿಲ್ಲೆಯ  ಲಕಿನಾಥ್‌ (20) ಮತ್ತು ಪೆರ್ಸು ನೌಗಂ ಬಂಧಿತರು.  ಇವರ ದೇಹದ ಮೇಲೆ ಪರಚಿದ ಗುರುತುಗಳಿದ್ದು ಇಬ್ಬರೂ ವಿಚಾರಣೆ ವೇಳೆ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಇವರು ಗುತ್ತಿಗೆ ಆಧಾರದ ಕಾರ್ಮಿಕರಾಗಿದ್ದರು ಎಂದು ಪೊಲೀಸರು ಮಂಗಳವಾರ ಹೇಳಿದ್ದಾರೆ.

ನ.28 ರಂದು ರಾತ್ರಿ 2.30ಕ್ಕೆ  ಮಹಿಳೆ ಕೊಠಡಿಗೆ ನುಗ್ಗಿದ ಇಬ್ಬರು ಅತ್ಯಾಚಾರ ನಡೆಸಿದ್ದರು. ಈಕೆ ಕೆಲಸದ ನಿಮಿತ್ತ ತನ್ನ ಸಹೋದ್ಯೋಗಿಗಳೊಂದಿಗೆ ಇಲ್ಲಿಗೆ ಬಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.