ಮಹಾರಾಷ್ಟ್ರ: ಅಳಿವಿನಂಚಿನಲ್ಲಿರುವ ಶಾರ್ಕ್ ಪ್ರಭೇದದ ಗರಗಸದ ಮೂತಿಯುಳ್ಳ ಕಡಲಮೀನು ಸಿಂಧುದುರ್ಗ ಕಡಲ ತೀರದಲ್ಲಿ ಉಸಿರುಗಟ್ಟಿ ಮೃತ್ತಪಟ್ಟಿದೆ ಎಂದು ತಿಳಿದುಬಂದಿದೆ.
ಮೃತ್ತಪಟ್ಟಿರುವ ಮೀನು ‘ಶಾರ್ಕ್’ ಪ್ರಭೇಧಕ್ಕೆ ಸೇರಿದ್ದಾಗಿದ್ದು, 15 ಅಡಿ ಉದ್ದ ಹಾಗೂ 700 ಕೆ.ಜಿ ತೂಕವಿದೆ. ಇದು ಅಳಿವಿನಂಚಿನಲ್ಲಿರುವ ಪ್ರಮುಖ ಪ್ರಭೇದಗಳಲ್ಲಿ ಒಂದು ಎಂದು ಸ್ಥಳಿಯ ಮೀನುಗಾರರೊಬ್ಬರು ತಿಳಿಸಿದ್ದಾರೆ.
ಈ ಪ್ರಭೇದದ ಮೀನನ್ನು 1972 ವನ್ಯಜೀವಿ ಸಂರಕ್ಷಣೆ ಕಾಯ್ದೆ ಅನ್ವಯ ಕೆಂಪು ಪಟ್ಟಿಗೆ ಸೇರಿಸಲಾಗಿದೆ.
‘ನೀರಿಗೆ ಹಾಕಿದ್ದ ಬಲೆಗೆ ಬೃಹತ್ ಗಾತ್ರದ ಮೀನು ಸಿಲುಕಿತ್ತು. ಐವರು ಸೇರಿ ಮೀನನ್ನು ನೀರಿನಿಂದ ದಡಕ್ಕೆ ತರಲಾಗಿತ್ತು. ಮೀನಿನ ಮೂತಿ ಬಲೆ ಸಿಲುಕಿಕೊಂಡು ಉಸಿರಾಟ ಸಮಸ್ಯೆಯಿಂದ ಮೀನು ಮೃತ್ತಪಟ್ಟಿದೆ’ ಎಂದು ಮೀನುಗಾರ ಮುನೀರ್ ಮುಜುಗರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.