
ಪ್ರಜಾವಾಣಿ ವಾರ್ತೆಭುವನೇಶ್ವರ (ಪಿಟಿಐ): ಕಂಧಮಲ್ ಜಿಲ್ಲೆಯಲ್ಲಿ ನಕ್ಸಲರು ಅಪಹರಿಸಿರುವ ಇಟಲಿಯ ಇಬ್ಬರು ಪ್ರಜೆಗಳು ಸುರಕ್ಷಿತವಾಗಿದ್ದು, ನಕ್ಸಲರು ತಮ್ಮ ಬೇಡಿಕೆಗಳ ಈಡೇರಿಕೆಗೆ ನೀಡಿದ್ದ ಗಡುವನ್ನು ಒಂದು ದಿವಸದ ಮಟ್ಟಿಗೆ ವಿಸ್ತರಿಸಿದ್ದಾರೆ.
ತಮ್ಮ 13 ಬೇಡಿಕೆಗಳ ಈಡೇರಿಕೆಗಾಗಿ ಗಡುವನ್ನು ವಿಸ್ತರಿಸಲಾಗಿದೆ ಎಂದು ಒಡಿಶಾ ಮಾವೊವಾದಿಗಳ ಸಂಘಟನಾ ಕಾರ್ಯದರ್ಶಿ ಖಾಸಗಿ ಟಿವಿ ವಾಹಿನಿಯೊಂದಕ್ಕೆ ಈ ವಿಷಯ ತಿಳಿಸಿದ್ದಾರೆ.
ಕಂಧಮಲ್ ಜಿಲ್ಲೆಯಲ್ಲಿ ಚಾರಣ ನಡೆಸುತ್ತಿದ್ದಾಗ ಈ ತಿಂಗಳ 14ರಂದು ಇಟಲಿಯ ಪ್ರಜೆಗಳಾದ ಪೊಲೊ ಬೊಸುಕೊ ಮತ್ತು ಕ್ಲಾಡಿಯೊ ಕೊಲಾಂಗೆಲೊ ಅವರನ್ನು ನಕ್ಸಲರು ಅಪಹರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.