ADVERTISEMENT

ಅಪ್ಪಂದಿರ ದಿನಾಚರಣೆ ಸ್ಮರಿಸಿದ ಗೂಗಲ್‌ ಡೂಡಲ್‌

ಅಪ್ಪಂದಿರ ದಿನಾಚರಣೆಯ ಶುಭಾಶಯಗಳು

ಏಜೆನ್ಸೀಸ್
Published 17 ಜೂನ್ 2018, 9:23 IST
Last Updated 17 ಜೂನ್ 2018, 9:23 IST
ಅಪ್ಪಂದಿರ ದಿನಾಚರಣೆ ಸ್ಮರಿಸಿದ ಗೂಗಲ್‌ ಡೂಡಲ್‌
ಅಪ್ಪಂದಿರ ದಿನಾಚರಣೆ ಸ್ಮರಿಸಿದ ಗೂಗಲ್‌ ಡೂಡಲ್‌   

ಬೆಂಗಳೂರು:ನಾಡಿನ ಸಮಸ್ತ ತಂದೆಯರಿಗೆ ಗೂಗಲ್‌ ಡೂಡಲ್‌ ಅಪ್ಪಂದಿರ ದಿನಾಚರಣೆಯ ಶುಭಾಶಯಗಳನ್ನು ವರ್ಣರಂಜಿತ ಡೈನೋಸಾರಸ್ ಚಿತ್ರಗಳ ಮೂಲಕ ಕೋರಿದೆ.

ಅಮೆರಿಕದ ಯುವತಿ ಸೋನಾರಾ ಲೂಯಿಸ್‌, ಅಮ್ಮಂದಿರ ದಿನದಂತೆ ‘ಅಪ್ಪಂದಿರ ದಿನ’ವನ್ನು ಆಚರಿಸಬೇಕು ಎಂದುಕೊಂಡಳು. ಆಕೆಯ ಆಲೋಚನೆಯಂತೆ 1910ರ ಜೂನ್‌ 19ರಂದು ‘ಅಪ್ಪಂದಿರ ದಿನ’ ಎಂಬ ಆಚರಣೆ ಚಾಲ್ತಿಗೆ ಬಂತು. ಭಾರತ ಸೇರಿದಂತೆ ಬಹುತೇಕ ರಾಷ್ಟ್ರಗಳಲ್ಲಿ ಜೂನ್ 3ನೇ ಭಾನುವಾರವನ್ನು ಅಪ್ಪಂದಿರ ದಿನವಾಗಿ ಆಚರಿಸಲಾಗುತ್ತಿದೆ.

ಸೋನಾರಾ ಲೂಯಿಸ್‌ ಅಲೋಚನೆಗೂ ಮುನ್ನ ಅಪ್ಪಂದರ ದಿನಾಚರಣೆಯ ಪರಿಕಲ್ಪನೆಯನ್ನುಗ್ರೇಸ್ ಗೋಲ್ಡನ್ ಕ್ಲೇಟನ್‌ರವರು ನೀಡಿದ್ದರು. ಮೊನಂಗದಲ್ಲಿ ಗಣಿಗಾರಿಕೆಯು ಸ್ಫೋಟಗೊಂಡು 200 ಮಂದಿ ನಾಗರೀಕರು ಸಾವನ್ನಪ್ಪಿದ್ದರು. ಇವರಿಗೆ ಗೌರವ ಅರ್ಪಿಸಬೇಕೆಂದು 1908ರಲ್ಲಿ ವೆಸ್ಟ್‌ ವರ್ಜೀನಿಯಾದ ಚರ್ಚ್‌ನಲ್ಲಿ ಅಪ್ಪಂದರ ದಿನಾಚರಣೆಯನ್ನು ಸೂಚಿಸಿದ್ದರು.

ADVERTISEMENT

ಅಪ್ಪಂದರ ದಿನಾಚರಣೆಯ ಪರಿಕಲ್ಪನೆ ಇಲ್ಲಿಂದ ಹುಟ್ಟಿಕೊಂಡರೂ ಇದನ್ನು ಯಾರೂ ಅಂತರಾಷ್ಟೀಯ ಮಟ್ಟದಲ್ಲಿ ಯಾರೂ ಆಚರಣೆ ಮಾಡಲಿಲ್ಲ. 1909ರಲ್ಲಿ ವಾಷಿಂಗ್‌ಟನ್‌ನ ಸ್ಪೋಕೆನ್‌ನ ಮಂತ್ರಿಗಳ ಒಕ್ಕೂಟ ಮತ್ತು ವೈಎಂಸಿಎ ಇದೇ ಪರಿಕಲ್ಪನೆಯನ್ನು ಸೊನಾರಾ ಸ್ಮಾರ್ಟ್ ಡಾಡ್ ಇಟ್ಟರೆ ಇದನ್ನು ಒಪ್ಪಿಕೊಳ್ಳಲಿಲ್ಲ. ಕಾರಣ ಜೂನ್‌ 5ರಂದು ಅವರ ತಂದೆಯ ಹುಟ್ಟುಹಬ್ಬವಾಗಿತ್ತು.

ಒಂದು ವರ್ಷದ ನಂತರ ಸ್ಪೋಕೆನ್‌ನಲ್ಲಿ 1910 ಜೂನ್‌ 19ರಂದು ಅಪ್ಪಂದರ ದಿನಾಚರಣೆಯನ್ನು ಆಚರಣೆ ಮಾಡಲಾಯಿತು. ಈ ಪರಿಕಲ್ಪನೆಯನ್ನು ಜನರು ಬಹುಬೇಗ ಒಪ್ಪಿಕೊಂಡರು. 1913ರಲ್ಲಿ ಅಮೆರಿಕದ ಕಾಂಗ್ರೆಸ್‌ನಲ್ಲಿ (ಕೆಳಮನೆ) ಅಪ್ಪಂದಿರ ದಿನಾಚರಣೆಯ ಮಸೂದೆಯನ್ನು ಮಂಡಿಸಲಾಯಿತು.ಅಂದು ರಾಷ್ಟ್ರೀಯ ರಜೆ ನೀಡಬೇಕು ಎಂಬ ಉಲ್ಲೇಖವೂ ಮಸೂದೆಯಲ್ಲಿತ್ತು. 1972ರಲ್ಲಿ ಮಸೂದೆಗೆ ಅಂಗೀಕಾರ ದೊರೆಯಿತು. ನಂತರದ ದಿನಗಳಲ್ಲಿ ಜೂನ್‌ ಮೂರನೇ ಭಾನುವಾರವನ್ನು ಅಪ್ಪಂದಿರ ದಿನ ಎಂದು ಘೋಷಿಸಲಾಯಿತು.

ಈ ಬಾರಿ ಗೂಗಲ್‌ ಸರ್ಚ್ ಎಂಜಿನ್ ಡೂಡಲ್‌ ಗೌರವ ನೀಡುವ ಮೂಲಕ ಅಪ್ಪಂದಿರ ದಿನಾಚರಣೆಯನ್ನು ಸಾಂಕೇತವಾಗಿ ಆಚರಿಸಿದೆ. ವರ್ಣರಂಚಿತ ಕೈ ಚಿತ್ರದಲ್ಲಿ ಡೈನೋಸಾರಸ್‌ಗಳು ಕಾಣುವಂತೆ ಬಿಂಬಿಸಲಾಗಿದೆ. ಚಿತ್ರವು ತಂದೆ ಮತ್ತು ಕುಟುಂಬದ ನಡುವಿನ ಸಂಬಂಧವನ್ನು ಸೂಚಿಸುತ್ತದೆ. ಹಿಂದಿನ ವರ್ಷ ಗೂಗಲ್‌ ಪಾಪಸ್‌ ಕಳ್ಳಿಯ ಅನಿಮೇಷನ್‌ ಮೂಲಕ ಪ್ರಕೃತಿ ಮತ್ತು ತಂದೆ ಎಂದು ಬಿಂಬಿಸಿತು. ಈ ಬಾರಿ ಡೈನೋಸಾರಸ್ ಮತ್ತು ತಂದೆಯನ್ನು ಬಿಂಬಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.