ಕೊಚ್ಚಿ (ಪಿಟಿಐ): ಇಲ್ಲಿನ ಅಲಪ್ಪುಳ ಸಮುದ್ರ ಪ್ರದೇಶದಲ್ಲಿ ವ್ಯಾಪಾರಿ ಹಡಗೊಂದು ದೋಣಿಗೆ ಡಿಕ್ಕಿ ಹೊಡೆದ ಪರಿಣಾಮ ನಾಪತ್ತೆಯಾಗಿದ್ದ ಮೂವರು ಮೀನುಗಾರರಲ್ಲಿ ಒಬ್ಬನ ಮೃತದೇಹಪತ್ತೆ ಹಚ್ಚುವಲ್ಲಿ ನೌಕಾಪಡೆಯ ಈಜು ಪರಿಣತರು ಯಶಸ್ವಿಯಾಗಿದ್ದಾರೆ.
ಮುಳುಗಿದ್ದ ದೋಣಿಯಲ್ಲಿ ಪತ್ತೆಯಾದ ಮೃತದೇಹವನ್ನು ಹೊರತೆಗೆದು ಸ್ಥಳೀಯ ಮೀನುಗಾರರಿಗೆ ಒಪ್ಪಿಸಲಾಗಿದೆ. ಇನ್ನಿಬ್ಬರು ಮೀನುಗಾರರು ಸಹ ಸಾವನ್ನಪ್ಪಿರುವ ಸಾಧ್ಯತೆ ಇದ್ದು ಪತ್ತೆ ಕಾರ್ಯ ಮುಂದುವರಿದಿದೆ. ಈ ದುರಂತಕ್ಕೆ ಸಿಂಗಪುರದ ಹಡಗು ಕಾರಣ ಎಂದು ಶಂಕಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.