ADVERTISEMENT

ಅಮೆರಿಕದ 30 ಸರಕುಗಳ ಸುಂಕ ಹೆಚ್ಚಿಸಲು ನಿರ್ಧಾರ

ಶೇ 50ರಷ್ಟು ಸುಂಕ ಏರಿಸುವುದು ಭಾರತದ ಉದ್ದೇಶ

ಪಿಟಿಐ
Published 16 ಜೂನ್ 2018, 18:48 IST
Last Updated 16 ಜೂನ್ 2018, 18:48 IST
ಅಮೆರಿಕದ 30 ಸರಕುಗಳ ಸುಂಕ ಹೆಚ್ಚಿಸಲು ನಿರ್ಧಾರ
ಅಮೆರಿಕದ 30 ಸರಕುಗಳ ಸುಂಕ ಹೆಚ್ಚಿಸಲು ನಿರ್ಧಾರ   

ನವದೆಹಲಿ: ಅಮೆರಿಕದಿಂದ ಆಮದು ಮಾಡಿಕೊಳ್ಳುವ 30 ಸರಕುಗಳ ಮೇಲೆ ಸುಂಕ ಹೆಚ್ಚಿಸಲು ಭಾರತ ಉದ್ದೇಶಿಸಿದೆ.

ಮೋಟರ್ ಸೈಕಲ್‌, ಕೆಲ ಕಬ್ಬಿಣ ಮತ್ತು ಉಕ್ಕಿನ ಉತ್ಪನ್ನ, ಬೋರಿಕ್‌ ಆ್ಯಸಿಡ್‌ ಸೇರಿದಂತೆ 30 ಸರಕಗಳ ಮೇಲೆ ಸುಂಕ ಹೆಚ್ಚಳದ ಪರಿಷ್ಕೃತ ಪಟ್ಟಿಯನ್ನು ಭಾರತವು ವಿಶ್ವ ವ್ಯಾಪಾರ ಸಂಘಟನೆಗೆ (ಡಬ್ಲ್ಯುಟಿಒ) ಸಲ್ಲಿಸಿದೆ. ಅಮೆರಿಕದ ನಿಲುವಿಗೆ ಪ್ರತೀಕಾರಾರ್ಥ ಕಸ್ಸಮ್ಸ್‌ ಸುಂಕವನ್ನು ಶೇ 50ರವರೆಗೆ ಹೆಚ್ಚಿಸಲು ಭಾರತ ಉದ್ದೇಶಿಸಿದೆ.

ಉಕ್ಕು ಮತ್ತು ಅಲ್ಯುಮಿನಿಯಂನ ಕೆಲ ಉತ್ಪನ್ನಗಳ ಆಮದಿನ ಮೇಲೆ ಅಮೆರಿಕವು ಸುಂಕ ಹೆಚ್ಚಿಸಿದ್ದರಿಂದ ಭಾರತದ ರಫ್ತು ವಹಿವಾಟಿನ ಮೇಲೆ ₹1,614 ಕೋಟಿ ನಷ್ಟ ಉಂಟಾಗಲಿದೆ. ಈಗ ಭಾರತವು 30 ಸರಕುಗಳ ಮೇಲಿನ ಆಮದು ಸುಂಕ ಹೆಚ್ಚಿಸುವುದರಿಂದ ಅಮೆರಿಕದ ರಫ್ತು ವಹಿವಾಟಿಗೂ ಇಷ್ಟೇ ಮೊತ್ತದ ನಷ್ಟ ಎದುರಾಗಲಿದೆ. ಅಮೆರಿಕದಿಂದ ಆಮದು ಮಾಡಿಕೊಳ್ಳುವ ಬಾದಾಮಿ, ಸೇಬು ಮತ್ತು ಕೆಲ ನಿರ್ದಿಷ್ಟ ಮಾದರಿಯ ಮೋಟರ್‌ ಬೈಕ್‌ಗಳೂ ಸೇರಿದಂತೆ 20 ಸರಕುಗಳ ಮೇಲೆ ಶೇ 100ವರೆಗೆ ಸುಂಕ ಹೆಚ್ಚಿಸುವುದಾಗಿ ಭಾರತ ಮೇ ತಿಂಗಳಿನಲ್ಲಿ ಪ್ರಕಟಿಸಿತ್ತು. ಈಗ 30 ಸರಕುಗಳ ಆಮದಿಗೆ ಸಂಬಂಧಿಸಿದ ರಿಯಾಯ್ತಿಗಳನ್ನು ರದ್ದು ಮಾಡುವುದಾಗಿ ತಿಳಿಸಿದೆ. ವ್ಯಾಪಾರ ಸುರಕ್ಷತೆಗೆ ಸಂಬಂಧಿಸಿದಂತೆ ಡಬ್ಲ್ಯುಟಿಒ ಒಪ್ಪಂದದಡಿ ಈ ಕ್ರಮಕ್ಕೆ ಮುಂದಾಗಿರುವುದಾಗಿ ಭಾರತ ತಿಳಿಸಿದೆ. ಉಕ್ಕು ಮತ್ತು ಅಲ್ಯುಮಿನಿಯಂ ಉತ್ಪನ್ನಗಳ ಮೇಲೆ ಗರಿಷ್ಠ ಪ್ರಮಾಣದಲ್ಲಿ ಸುಂಕ ವಿಧಿಸುವ ನಿರ್ಧಾರವನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮಾರ್ಚ್‌ 9ರಂದು ಪ್ರಕಟಿಸಿದ್ದರು.

ADVERTISEMENT

ಡಬ್ಲ್ಯುಟಿಒಗೆ ಸುಂಕ ಹೆಚ್ಚಳದ ಪರಿಷ್ಕೃತ ಪಟ್ಟಿ

30 ಸರಕುಗಳ ಆಮದು ರಿಯಾಯ್ತಿ ರದ್ದು

ಅಮೆರಿಕದ ರಫ್ತು ವಹಿವಾಟಿಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.