ADVERTISEMENT

ಅರುಣಾಚಲ ಪ್ರದೇಶ ಅಧಿಕಾರಿ ಅಪಹರಣ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2014, 19:30 IST
Last Updated 8 ಮಾರ್ಚ್ 2014, 19:30 IST

ಇಟಾನಗರ (ಪಿಟಿಐ): ಎರಡು ದಿನಗಳ ಹಿಂದೆ ಅರುಣಾಚಲ ಪ್ರದೇಶದ ಗ್ರಾಮೀಣ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡೊಲಿ ನ್ಯೂಡು ಅವರನ್ನು ಅಪರಿಚಿತರು ಅಪಹರಿಸಿದ್ದಾರೆ.

ಡೊಲಿ ನ್ಯೂಡು ಅವರನ್ನು ಅಧಿಕೃತ ನಿವಾಸದಿಂದ ಅಪಹರಿಸಲಾಗಿದೆ. ಅವರ ಬಗ್ಗೆ ಇದುವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಈ ನಡುವೆ ‘ಮಾನವೀಯ ನೆಲೆಯಲ್ಲಿ ನ್ಯೂಡು ಅವರನ್ನು ಬಿಡುಗಡೆ ಮಾಡುವಂತೆ’ ಮುಖ್ಯಮಂತ್ರಿ ನಬಂ ಟುಕಿ ಅಪ­ಹರ­ಣಕಾರರಲ್ಲಿ ಮನವಿ ಮಾಡಿ­ದ್ದಾರೆ. ಪತ್ತೆ ಕಾರ್ಯವನ್ನು ಚುರುಕುಗೊಳಿ­ಸು­ವಂತೆ ಟುಕಿ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ರಾಜ್ಯದ ವಿವಿಧ ಸಂಘ ಸಂಸ್ಥೆಗಳೂ ನ್ಯೂಡು ಅವರನ್ನು ಬಿಡುಗಡೆಗೆ ಮನವಿ ಮಾಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.