ನವದೆಹಲಿ (ಪಿಟಿಐ): ಪರಿಸರ ಸ್ನೇಹಿ ಮತ್ತು ವಿದ್ಯುತ್ ಉಳಿತಾಯದ `ಎಲ್‌ಇಡಿ~ ಬಲ್ಬ್‌ಗಳನ್ನೇ ಬಳಸಿ ಎಂದು ಸರ್ಕಾರ ಹೇಳಿದರೂ ದುಬಾರಿ ಹಣ ತೆತ್ತು ಕೊಳ್ಳಬೇಕಲ್ಲ ಎಂದು ಯೋಚಿಸುತ್ತಿರುವ ಒಂದು ಸಿಹಿಸುದ್ದಿ. ರಾಜಧಾನಿಯಲ್ಲಿ ಅರ್ಧ ಬೆಲೆಯಲ್ಲಿ ಈ ಬಲ್ಬ್‌ಗಳು ಮಾರುಕಟ್ಟೆಯಲ್ಲಿ ದೊರೆಯಲಿವೆ!
ಬಿಎಸ್‌ಇಎಸ್ ರಾಜಧಾನಿ ಪವರ್ ಲಿಮಿಟೆಡ್ ಕಂಪೆನಿ ಈ ಕೊಡುಗೆ ನೀಡುತ್ತಿದೆ. `ಲೈಟ್- ಎಮಿಟಿಂಗ್ ಡೈಓಡ್~ (ಎಲ್‌ಇಡಿ) ಯೋಜನೆಯಡಿ ಶುಕ್ರವಾರ ಈ ಕೊಡುಗೆ ಜಾರಿಗೆ ತರಲಾಗಿದ್ದು, ಮಾರುಕಟ್ಟೆಯಲ್ಲಿ ರೂ 700ರಿಂದ 800 ಬೆಲೆ ಇರುವ ಈ ಬಲ್ಬನ್ನು ರೂ 399ಕ್ಕೆ ಮಾರಾಟ ಮಾಡಲಾಗುವುದು ಎಂದು ಕಂಪೆನಿ ಹೇಳಿದೆ.
ಪಾದರಸ ಹೊಂದಿರುವ ಸಿಎಫ್‌ಎಲ್ ಬಲ್ಬ್‌ಗಿಂತ ಎಲ್‌ಇಡಿ ಬಲ್ಬ್‌ಗಳು ಹೆಚ್ಚು ಪರಿಸರ ಸ್ನೇಹಿ. ಜತೆಗೆ ಇವುಗಳಿಂದ ವಿದ್ಯುತ್ ಉಳಿತಾಯ ವಾಗುತ್ತದೆ. ಆದ್ದರಿಂದ ಎಲ್‌ಇಡಿ ಬಲ್ಬ್‌ಗಳನ್ನೇ ಬಳಸಿ ಎಂದು ಎಂದು ದೆಹಲಿ ಸರ್ಕಾರ ಅರಿವು ಮೂಡಿಸುತ್ತಿದೆ.
ಕಡಿಮೆ ದರದಲ್ಲಿ ಎಲ್‌ಇಡಿ ಬಲ್ಬ್ ನೀಡುವ ಸಂಬಂಧ ಏರ್ಪಡಿಸಿದ್ದ ಕಾರ್ಯಕ್ರಮವನ್ನು ದೆಹಲಿ ಮುಖ್ಯ ಮಂತ್ರಿ ಶೀಲಾ ದೀಕ್ಷಿತ್ ಉದ್ಘಾಟಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.