ADVERTISEMENT

ಅವಧಿ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2012, 19:30 IST
Last Updated 18 ಅಕ್ಟೋಬರ್ 2012, 19:30 IST

ನವದೆಹಲಿ (ಪಿಟಿಐ): `ಪಶ್ಚಿಮಘಟ್ಟ ಪರಿಸರ ತಜ್ಞರ ಸಮಿತಿ~ ವರದಿ ಅಧ್ಯಯನಕ್ಕಾಗಿ ರಚಿಸಲಾಗಿದ್ದ ಉನ್ನತ ಮಟ್ಟದ ಸಮಿತಿಗೆ ನೀಡಿದ್ದ ಕಾಲಾವಕಾಶವನ್ನು ಕೇಂದ್ರ ಪರಿಸರ ಸಚಿವಾಲಯ 4 ತಿಂಗಳು ವಿಸ್ತರಿಸಿದೆ.

ಪರಿಸರ ತಜ್ಞ ಮಾಧವ ಗಾಡ್ಗೀಳ್ ಅವರ ತಂಡ `ಅಭಿವೃದ್ಧಿ ಹೆಸರಲ್ಲಿ ಪಶ್ಚಿಮಘಟ್ಟಗಳಲ್ಲಿನ ಪ್ರಕೃತಿ ವಿರೋಧಿ ಚಟುವಟಿಕೆ ಮತ್ತು ಪರಿಹಾರಗಳ~ ಕುರಿತು ಕೇಂದ್ರಕ್ಕೆ ವರದಿ ಸಲ್ಲಿಸಿತ್ತು. ಈ ವರದಿಯನ್ನು ಕೆಲ ರಾಜ್ಯಗಳು ವಿರೋಧಿಸಿದ್ದವು. ಗಾಡ್ಗೀಳ್ ವರದಿ ಪುನರ್ ಪರಿಶೀಲನೆಗಾಗಿ ಕೇಂದ್ರವು ಆ. 1ರಂದು ವಿಜ್ಞಾನಿ ಕೆ.ಕಸ್ತೂರಿರಂಗನ್  ನೇತೃತ್ವದಲ್ಲಿ ತಂಡ ರಚಿಸಿತ್ತು. ಈ ತಂಡಕ್ಕೆ ವರದಿ ಸಲ್ಲಿಸಲು ಸರ್ಕಾರ ಫೆ.16ರವರೆಗೆ ಕಾಲಾವಕಾಶ ನೀಡಿದೆ.

ಉಗ್ರ ಬಿಲಾಲ್‌ಗೆ ಪಾಕ್‌ನಲ್ಲಿ ತರಬೇತಿ

ನಾಸಿಕ್ (ಪಿಟಿಐ): ಲಷ್ಕರ್ -ಎ-ತೊಯ್ಬಾಕ್ಕೆ ಸೇರಿದ ಬಂಧಿತ ಉಗ್ರ ಬಿಲಾಲ್ ಶೇಖ್ ಮಹಾರಾಷ್ಟ್ರದ ಪೊಲೀಸ್ ಅಕಾಡೆಮಿ(ಎಂಪಿಎ) ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದ.  ಈತ 2010ರಲ್ಲಿ ಪಾಕಿಸ್ತಾನದಲ್ಲಿ ವಿಶೇಷ ತರಬೇತಿ ಪಡೆದಿದ್ದ ಎಂದು ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್) ಕೋರ್ಟ್‌ಗೆ ತಿಳಿಸಿದೆ.

ಭಾರತದ ಮೇಲೆ ದಾಳಿ ನಡೆಸಲು ಬಿಲಾಲ್ ಪಾಕಿಸ್ತಾನದ ಮುಜಾಫರಾಬಾದ್‌ನ  ಶಿಬಿರದಲ್ಲಿ  ತರಬೇತಿ ಪಡೆದಿದ್ದ ಎಂದು ಪುಣೆ ಎಟಿಎಸ್  ಅಧಿಕಾರಿಗಳು ಹೆಚ್ಚುವರಿ ಸೆಷನ್ಸ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.