ADVERTISEMENT

ಅವಳಿ ಮಕ್ಕಳ ಜಂಟಿ ತಲೆಗಳನ್ನು ಬೇರ್ಪಡಿಸಲಿದ್ದಾರೆ ಏಮ್ಸ್‌ ವೈದ್ಯರು

ಏಜೆನ್ಸೀಸ್
Published 15 ಜುಲೈ 2017, 14:40 IST
Last Updated 15 ಜುಲೈ 2017, 14:40 IST
ಅವಳಿ ಮಕ್ಕಳ ಜಂಟಿ ತಲೆಗಳನ್ನು ಬೇರ್ಪಡಿಸಲಿದ್ದಾರೆ ಏಮ್ಸ್‌ ವೈದ್ಯರು
ಅವಳಿ ಮಕ್ಕಳ ಜಂಟಿ ತಲೆಗಳನ್ನು ಬೇರ್ಪಡಿಸಲಿದ್ದಾರೆ ಏಮ್ಸ್‌ ವೈದ್ಯರು   

ನವದೆಹಲಿ: ಒಡಿಸಾದ ಕಂಧಮಾಲ್ ಜಿಲ್ಲೆಯ ಜಗನಾಥ್‌, ಬಲರಾಮ್‌ ಎಂಬ ಅವಳಿ ಮಕ್ಕಳ ತಲೆಗಳು ಎರಡು ಕೂಡಿಕೊಂಡಿದ್ದು, ಇದೀಗ ದೆಹಲಿ ಏಮ್ಸ್‌ ಆಸ್ಪತ್ರೆಯ ವೈದ್ಯರು ತಲೆಗಳನ್ನು ಬೇರ್ಪಡಿಸಲು ಚಿಕಿತ್ಸೆ ನೀಡಲಿದ್ದಾರೆ.

ಎರಡು ವರ್ಷದ ಅವಳಿ ಜೋಡಿಯ ತಲೆಗಳನ್ನು ಬೇರ್ಪಡಿಸುವ ನಿಟ್ಟಿನಲ್ಲಿ ಶಸ್ತ್ರಚಿಕಿತ್ಸೆ ನೀಡಲು ಏಮ್ಸ್‌ ವೈದ್ಯರು ಸಿದ್ಧತೆ ನಡೆಸಿದ್ದಾರೆ.

ಈ ಕುರಿತು ಮಕ್ಕಳ ಪೋಷಕರು ಹಾಗೂ ರಾಷ್ಟ್ರೀಯ ಹದಿಹರೆಯದ ಮಕ್ಕಳ ಆರೋಗ್ಯ ಯೋಜನೆಯ ಸಹಾಯಕ ವ್ಯವಸ್ಥಾಪಕ ಸೌಮ್ಯ ಸಾಮಂಟ್ರೆ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.

ADVERTISEMENT

‘ಇದು ಅಪರೂಪದ ಪ್ರಕರಣವಾಗಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾದ ಮಕ್ಕಳಿಗೆ ಎಂಆರ್‌ಐ, ಸಿಟಿ ಸ್ಕ್ಯಾನ್‌, ಆಂಜಿಯೋಗ್ರಾಮ್ ಸೇರಿದಂತೆ ಹಲವು ಪರೀಕ್ಷೆಗಳನ್ನು ನಡೆಸಿ ತಲೆಗಳನ್ನು ವಿಂಗಡಿಸಲಾಗುತ್ತದೆ’ ಎಂದು ಏಮ್ಸ್‌ನ ನರ ವಿಜ್ಞಾನ ಕೇಂದ್ರದ ವೈದ್ಯ ಎ.ಕೆ. ಮಹಾಪಾತ್ರ ತಿಳಿಸಿದ್ದಾರೆ.

ಶಸ್ತ್ರಚಿಕಿತ್ಸೆಯ ನಂತರ ಸುಮಾರು 10ರಿಂದ 12 ವರ್ಷಗಳ ಕಾಲ ಮಕ್ಕಳ ಆರೋಗ್ಯ ಕುರಿತು ಹಲವು ಪರೀಕ್ಷೆಗಳನ್ನು ನಡೆಸಬೇಕಾಗುತ್ತದೆ ಎಂದಿದ್ದಾರೆ.

ಡಾ. ದೀಪಕ್‌ ಗುಪ್ತಾ ಮಾತನಾಡಿ, ‘ಸಂಯೋಜಿಸಲ್ಪಟ್ಟ ತಲೆಗಳೊಂದಿಗೆ ಅವಳಿ ಮಕ್ಕಳು ಜನಿಸುವುದು ತೀರ ಅಪರೂಪ 30 ಲಕ್ಷ ಮಕ್ಕಳಲ್ಲಿ ಒಬ್ಬರಂತೆ ಜನಿಸುತ್ತಾರೆ. ಹಾಗೇ ಜನಿಸಿದ ಮಕ್ಕಳಲ್ಲಿ ಶೆ 50 ಮಕ್ಕಳು ಜನಿಸಿದ 24 ಗಂಟೆಯಲ್ಲಿ ಮೃತಪಡುವ ಸಾಧ್ಯತೆ ಇರುತ್ತದೆ ಎಂದಿದ್ದಾರೆ.

ಶಸ್ತ್ರಚಿಕಿತ್ಸೆಯ ಬಳಿಕ ಶೆ 20ಕ್ಕೂ ಕಡಿಮೆ ಪ್ರಮಾಣದ ಮಕ್ಕಳ ಬದುಕುಳಿಯುವ ಸಾಧ್ಯತೆ ಇರುವುದಾಗಿ ಡಾ.ದೀಪಕ್‌ ಗುಪ್ತಾ ತಿಳಿಸಿದ್ದಾರೆ.
ಜಗನಾಥ್‌, ಬಲರಾಮ್‌ ಅವರ ಪೋಷಕರು ಬಡ ರೈತ ಕುಟುಂಬದವರಾಗಿದ್ದು, ತಮ್ಮ ಮಕ್ಕಳಿಗೆ ವೈದ್ಯರು ಸೂಕ್ತ ಶಸ್ತ್ರಚಿಕಿತ್ಸೆ ನೀಡಿ ಬದುಕುಳಿಸುತ್ತಾರೆ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.