ADVERTISEMENT

ಅಸಾರಾಂ ಬಾಪು ಅತ್ಯಾಚಾರ ಪ್ರಕರಣ: ತೀರ್ಪಿಗೂ ಮುನ್ನ ಬಿಗಿ ಭದ್ರತೆ, ಏ.30 ರವರೆಗೆ 144 ಸೆಕ್ಷನ್‌ ಜಾರಿ!

ಏಜೆನ್ಸೀಸ್
Published 21 ಏಪ್ರಿಲ್ 2018, 9:45 IST
Last Updated 21 ಏಪ್ರಿಲ್ 2018, 9:45 IST
ಅಸಾರಾಂ ಬಾಪು ಅತ್ಯಾಚಾರ ಪ್ರಕರಣ: ತೀರ್ಪಿಗೂ ಮುನ್ನ ಬಿಗಿ ಭದ್ರತೆ, ಏ.30 ರವರೆಗೆ 144 ಸೆಕ್ಷನ್‌ ಜಾರಿ!
ಅಸಾರಾಂ ಬಾಪು ಅತ್ಯಾಚಾರ ಪ್ರಕರಣ: ತೀರ್ಪಿಗೂ ಮುನ್ನ ಬಿಗಿ ಭದ್ರತೆ, ಏ.30 ರವರೆಗೆ 144 ಸೆಕ್ಷನ್‌ ಜಾರಿ!   

ಜೋಧಪುರ: ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಏಪ್ರಿಲ್‌ 25ರಂದು ತೀರ್ಪು ಪ್ರಕಟವಾಗಲಿದ್ದು, ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತೆಯಾಗಿ ಬಿಗಿ ಭದ್ರತೆ ಒದಗಿಸಲಾಗಿದೆ ಎಂದು ಜೋಧಪುರ ಪೊಲೀಸರು ಹೇಳಿದ್ದಾರೆ.

ಏಪ್ರಿಲ್‌ 30ರ ವರೆಗೆ ಜೋಧಪುರದಲ್ಲಿ ಸಿಆರ್‌ಪಿಸಿ 144 ಸೆಕ್ಷನ್‌ ಜಾರಿಯಲ್ಲಿರಲಿದೆ ಎಂದೂ ತಿಳಿಸಿದ್ದಾರೆ.

‘ಏಪ್ರಿಲ್‌ 25ರಂದು ಜೋಧಪುರ ಕೇಂದ್ರ ಕಾರಾಗೃಹದಲ್ಲಿಯೇ ಅಸಾರಾಂ ಬಾಪು ವಿರುದ್ಧದ ಅತ್ಯಾಚಾರ ಪ್ರಕರಣದ ತೀರ್ಪು ನೀಡಲು ರಾಜಸ್ಥಾನ ಹೈಕೋರ್ಟ್‌ ಸಿದ್ಧತೆ ನಡೆಸಿದೆ. ಹಾಗಾಗಿ ನಗರದಲ್ಲಿ ಏ.30ರ ವರೆಗೆ 144 ಸೆಕ್ಷನ್‌ ಜಾರಿಯಲ್ಲಿರಲಿದೆ. ಕಾನೂನು ಪಾಲಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇವೆ. ನಾಲ್ಕಕ್ಕಿಂತ ಹೆಚ್ಚಿನ ಜನರು ಸಾರ್ವಜನಿಕವಾಗಿ ಗುಂಪುಗೂಡುವಂತಿಲ್ಲ’ ಎಂದು ಎಚ್ಚರಿಕೆ ನೀಡಿದ್ದಾರೆ.

ADVERTISEMENT

ಈ ಹಿಂದೆ ಸ್ವಯಂ ಘೋಷಿತ ದೇವಮಾನವ, ಡೇರಾ ಸಚ್ಚಾ ಸೌದಾದ ಮುಖ್ಯಸ್ಥ ಗುರ್ಮೀತ್‌ ರಾಮ್‌ ರಹೀಮ್‌ಗೆ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆ ಪ್ರಕಟವಾದಾಗ ಗಲಭೆ ನಡೆದಿದ್ದವು. ಇದನ್ನು ಉಲ್ಲೇಖಸಿದ್ದ ಪೊಲೀಸರು ಕಾನೂನು ಸುವ್ಯವಸ್ಥೆಗೆ ಅಡ್ಡಿಯಾಗದಂತೆ ಮುನ್ನೆಚ್ಚರಿಕೆ ವಹಿಸಿ ತೀರ್ಪು ನೀಡುವಂತೆ ಮೇಲ್ಮನವಿ ಸಲ್ಲಿಸಿದ್ದರು.

ಹಾಗಾಗಿ ಜೈಲಿನಲ್ಲಿಯೇ ತೀರ್ಪು ನೀಡಲು ಏಪ್ರಿಲ್‌ 17 ರಂದು ನಿರ್ಧರಿಸಲಾಗಿದ್ದು.

ಸದ್ಯ ರಾಜಸ್ಥಾನ ಹಾಗೂ ಗುಜರಾತ್‌ನಲ್ಲಿ ಎರಡು ಪ್ರತ್ಯೇಕ ಅತ್ಯಾಚಾರ ಪ್ರಕರಣಗಳ ವಿಚಾರಣೆ ಎದುರಿಸುತ್ತಿರುವ ಬಾಪು ರಾಜಸ್ಥಾನ ಕೇಂದ್ರ ಕಾರಾಗೃಹದ ವಶದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.