ADVERTISEMENT

ಆಂಧ್ರಪ್ರದೇಶ: ರೂ. 1.45ಲಕ್ಷ ಕೋಟಿ ಬಜೆಟ್ ಮಂಡನೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2012, 10:25 IST
Last Updated 17 ಫೆಬ್ರುವರಿ 2012, 10:25 IST

ಹೈದರಾಬಾದ್, (ಪಿಟಿಐ): ಆಂಧ್ರಪ್ರದೇಶ ಸರ್ಕಾರವು 2012-13ನೇ ಸಾಲಿನ ಹಣಕಾಸಿನ ವರ್ಷಕ್ಕೆ ಸಂಬಂಧಿಸಿದಂತೆ ಬರೊಬ್ಬರಿ ಸುಮಾರು ರೂ. 1.45ಲಕ್ಷ ಕೋಟಿ ಮೊತ್ತದ ಬಜೆಟ್‌ನ್ನು ಶುಕ್ರವಾರ ಮಂಡನೆ ಮಾಡಿದೆ. ಇದರೊಂದಿಗೆ ರೂ. 20.008 ಕೋಟಿ ಹಣಕಾಸಿನ ಕೊರತೆ ಆಯವ್ಯಯವನ್ನು ಕೂಡ ಪ್ರಸ್ತಾಪಿಸಿದೆ.  

ರಾಜ್ಯ ಹಣಕಾಸು ಸಚಿವ ಅನಮ್ ರಾಮನಾರಾಯಣ ರೆಡ್ಡಿ ಪ್ರಸಕ್ತ ಸಾಲಿನ ಬಜೆಟ್‌ನ್ನು ಮಂಡನೆ ಮಾಡಿ, ` ಪ್ರಸ್ತುತ ಹಣಕಾಸಿನ ವರ್ಷದ ಬಜೆಟ್ ಸ್ಥಿರವಾಗಿದ್ದು, ಹಿಂದಿನ ಆಯವ್ಯಯ ಎಲ್ಲಾ ಕ್ಷೇತ್ರಗಳಲ್ಲಿ  ನಿಗಧಿತ ಗುರಿಯನ್ನು ಸಾಧಿಸಲು ಸಾಧ್ಯವಾಗಿಲ್ಲ. ಆದರೂ ಪ್ರಸಕ್ತ ಸಾಲಿನ ಬಜೆಟ್ ಶೇಕಡವಾರು ಎಲ್ಲಾ ವಲಯಗಳ ಹಂಚಿಕೆಯಲ್ಲಿ ಸಮಾನವಾಗಿದೆ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.