ಹೈದರಾಬಾದ್, ನವದೆಹಲಿ (ಪಿಟಿಐ): ಆಂಧ್ರಪ್ರದೇಶ ವಿಭಜಿಸುವ ಕೇಂದ್ರ ಸಂಪುಟದ ನಿರ್ಧಾರ ವಿರೋಧಿಸಿ ರಾಜ್ಯದ ವಿದು್ಯತ್ ವಿತರಣಾ ಕಂಪೆನಿಗಳ ನೌಕರರು ನಡೆಸುತ್ತಿರುವ ಅನಿರ್ದಿ ಷ್ಟಾವಧಿ ಮುಷ್ಕರ ಸೋಮ ವಾರ ಎರಡನೇ ದಿನಕ್ಕೆ ಕಾಲಿಟ್ಟಿದ್ದು ಸೀಮಾಂಧ್ರ ಪ್ರದೇಶ ಕತ್ತಲೆಯಲ್ಲಿ ಮುಳುಗಿ ಜನಜೀವನ ಅಸ್ತವ್ಯಸ್ತವಾಗಿದೆ.
ಈ ನಡುವೆ, ಸೀಮಾಂಧ್ರ ಭಾಗದ ನಾಲ್ವರು ಕೇಂದ್ರ ಸಚಿವರು ಸೋಮವಾರ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿ ತಮ್ಮ ರಾಜೀನಾಮೆ ಸ್ವೀಕರಿಸಲು ಪಟು್ಟಹಿಡಿದರಾದರೂ ಈ ಕುರಿತು ಪ್ರಧಾನಿಯಿಂದ ಯಾವುದೇ ಭರವಸೆ ಸಿಗಲಿಲ್ಲ.
ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಎಂ.ಎಂ. ಪಲ್ಲಂ ರಾಜು, ಪ್ರವಾಸೋದ್ಯಮ ಸಚಿವ ಕೆ. ಚಿರಂಜೀವಿ, ವಾಣಿಜ್ಯ ಖಾತೆ ರಾಜ್ಯ ಸಚಿವೆ ಡಿ. ಪುರಂದೇಶ್ವರಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ಸೂರ್ಯಪ್ರಕಾಶ್ ರೆಡ್ಡಿ ಅವರುಗಳೇ ರಾಜೀನಾಮೆ ನೀಡಿದ ಸಚಿವರು. ಈ ಎಲ್ಲರೂ ತಮ್ಮ ಕಚೇರಿಗೆ ಹಾಜರಾಗದಿರಲು ನಿರ್ಧರಿ ಸಿದ್ದಾರೆ. ರಾಜೀನಾಮೆ ಸ್ವೀಕರಿಸುವ ಕುರಿತು ಪ್ರಧಾನಿ ಯಾವುದೇ ಭರವಸೆ ನೀಡದೆ ಈ ಕುರಿತು ಪರಿಶೀಲನೆ ನಡೆಸುವೆ ಎಂದಷ್ಟೇ ತಿಳಿಸಿದ್ದಾರೆ.
ಆಂಧ್ರಪ್ರದೇಶದಲಿ್ಲ ಉಂಟಾಗಿರುವ ಅಶಾಂತಿಯ ಕುರಿತು ಗೃಹ ಸಚಿವ ಸುಶೀಲಕುಮಾರ್ ಶಿಂಧೆ ಪ್ರಧಾನಿ ಅವರನು್ನ ಭೇಟಿ ಮಾಡಿ ತೆಗೆದುಕೊಳ್ಳಲಾದ ಕ್ರಮಗಳ ಕುರಿತು ಮಾಹಿತಿ ನೀಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಿಂಧೆ, ಆಂಧ್ರದ ಎಲ್ಲ ಭಾಗದವರಿಗೆ ನ್ಯಾಯ ದಕ್ಕುವ ಹಾಗೆ ಸರ್ವಸಮ್ಮತ ಪರಿಹಾರ ಕಂಡುಕೊಳ್ಳಲಾಗುವುದು; ಎಲ್ಲರ ಹಿತಾಸಕ್ತಿ ಕಾಯಲಾಗುವುದು ಎಂದರು.
ಮುಂದುವರಿದ ಕರ್ಫೂ:ಮುಷ್ಕರದ ಬಿಸಿ ರಾಜಧಾನಿ ಹೈದರಾಬಾದ್ಗೂ ತಟ್ಟಿದೆ. ಹಿಂಸಾಕೃತ್ಯಗಳು ನಡೆದ ವಿಜಯನಗರಂ ಪಟ್ಟಣದಲ್ಲಿ ಸೋಮವಾರವೂ ಸಿ್ಥತಿ ತಿಳಿಯಾಗದ ಕಾರಣ ಕರ್ಫೂ ಮುಂದುವರಿಸಲಾಗಿದೆ.
ನೌಕರರ ಮುಷ್ಕರದಿಂದ ವಿದು್ಯತ್ ಉತ್ಪಾದನೆ ಹಾಗೂ ವಿತರಣೆ ಮೇಲೆ ಪ್ರತಿಕೂಲ ಪರಿಣಾಮ ಬೀರಿದ್ದು ನೂರಾರು ಹಳ್ಳಿಗಳು ಕತ್ತಲಲ್ಲಿ ಮುಳುಗಿವೆ. ಇದರಿಂದಾಗಿ ಹಲವಾರು ರೈಲು ಗಳ ಸಂಚಾರವನ್ನು ರದು್ದಮಾಡಲಾಗಿದ್ದು ತಿರುಪತಿ ಯಲ್ಲಿ ನಡೆಯುತ್ತಿರುವ ‘ಬ್ರಹ್ಮೋತ್ಸವ’ ಸ್ಥಗಿತಗೊಳು್ಳವ ಸಾಧ್ಯತೆಯೂ ಇದೆ ಎನ್ನಲಾಗಿದೆ.
6,090 ಮೆಗಾವಾಟ್ ವಿದು್ಯತ್ ಉತ್ಪಾದನೆಯ ಬದಲು ಕೇವಲ 2,990 ಮೆಗಾವಾಟ್ ವಿದು್ಯತ್ ಉತ್ಪಾದನೆಯಾಗಿದು್ದ ಎಲ್ಲೆಡೆ ಕೊರತೆ ಉಂಟಾಗಿದೆ.
ಪೂರೈಕೆ ಸಮಸ್ಯೆಯಿಂದಾಗಿ ರಾಜ್ಯದ ಹಲವಾರು ಗಾ್ಯಸ್ ಆಧಾರಿತ ವಿದು್ಯತ್ ಘಟಕಗಳೂ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ ಸಮಸೆ್ಯ ಬಿಗಡಾ ಯಿಸಿದ್ದು ಮುಷ್ಕರ ನಿರತ ನೌಕರರ ಪ್ರತಿನಿಧಿಗಳ ಜತೆ ವಿದು್ಯತ್ ಖಾತೆ ಅಧಿಕಾರಿಗಳು ಹೈದರಾ ಬಾದ್‌ನಲ್ಲಿ ಮಾತುಕತೆ ನಡೆಸಿದರು.
ನಿಲ್ಲದ ಪ್ರತಿಭಟನೆ: ಈ ನಡುವೆ ವಿಭಜನೆ ವಿರೋಧಿಸಿ ಸೀಮಾಂಧ್ರ ವ್ಯಾಪ್ತಿಯ 13 ಜಿಲ್ಲೆಗಳಲ್ಲಿ ಸೋಮವಾರವೂ ಪ್ರತಿಭಟನೆಗಳು ನಡೆದವು. ಹಲವೆಡೆ ವಿದ್ಯಾರ್ಥಿಗಳು ಬೀದಿಗಿಳಿದು ಮುಷ್ಕರದಲ್ಲಿ ಪಾಲೊ್ಗಂಡರು. ಸುಮಾರು 6 ಲಕ್ಷ ಸರ್ಕಾರಿ ನೌಕರರು ಹಾಗೂ ಶಿಕ್ಷಕರು ಮುಷ್ಕರದಲ್ಲಿ ಪಾಲೊ್ಗಂಡಿದ್ದಾರೆ ಎನ್ನಲಾಗಿದೆ. ಮುಖ್ಯಮಂತ್ರಿ ಕಿರಣ್‌ಕುಮಾರ್ ರೆಡ್ಡಿ ಇದೇ 9 ರಂದು ಮುಷ್ಕರನಿರತ ನೌಕರರ ಜತೆ ಸಮಾಲೋಚನೆ ನಡೆಸಲಿದ್ದಾರೆ.
ವಿಭಜನೆ ವಿರೋಧಿಸಿ ಈಗಾಗಲೇ ವೈಎಸ್‌ಆರ್ ಕಾಂಗ್ರೆಸ್ ಅಧ್ಯಕ್ಷ ವೈ.ಎಸ್. ಜಗನ್‌ಮೋಹನ್ ರೆಡ್ಡಿ ಕಳೆದ ಶನಿವಾರದಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಚಂದ್ರಬಾಬು ಆಮರಣ ನಿರಶನ: ಆಂಧ್ರವನ್ನು ಹೋಳು ಮಾಡುವ ಕೇಂದ್ರದ ತೀರ್ಮಾನದ ವಿರುದ್ಧ ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸೋಮವಾರ ಇಲ್ಲಿ ಆಮರಣ ನಿರಶನ ಆರಂಭಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಾಯ್ಡು, ‘ಮುಂಬರುವ ಲೋಕಸಭಾ ಚುನಾವಣೆ ಗಮನದಲ್ಲಿ ಇಟ್ಟುಕೊಂಡು ಕಾಂಗ್ರೆಸ್ ರಾಜಕೀಯದಾಟ ಆಡುತ್ತಿದೆ. ಏಕಪಕ್ಷೀಯವಾಗಿ ಈ ನಿರ್ಧಾರ ಕೈಗೊಳ್ಳಲಾಗಿದ್ದು ಇದರಿಂದ ಜನ ರಾಜಕೀಯ ವ್ಯವಸ್ಥೆಯ ಮೇಲಿಟ್ಟಿರುವ ವಿಶ್ವಾಸವನ್ನೇ ಕಳೆದುಕೊಂಡಿದಾ್ದರೆ’ ಎಂದು ಟೀಕಿಸಿದರು.
ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಯ ಪರ ಇದ್ದೀರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ನಾಯ್ಡು, ‘ನನಗೆ ರಾಜ್ಯದ ಮೂರು ಭಾಗಗಳೂ ಅಷ್ಟೆ ಮುಖ್ಯ. ಮೂವರು ಮಕ್ಕಳನ್ನು ಹೊಂದಿರುವ ತಂದೆ ಹೇಗೆ ಎಲ್ಲ ಮಕ್ಕಳನ್ನು ಸಮಾನವಾಗಿ ಕಾಣುತ್ತಾನೊ ಹಾಗೆ ನಾನೂ ಸಹ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.