ADVERTISEMENT

ಆದರ್ಶ ಹಗರಣ: ತನಿಖಾ ವರದಿ ತಿರಸ್ಕಾರ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2013, 19:30 IST
Last Updated 20 ಡಿಸೆಂಬರ್ 2013, 19:30 IST

ನಾಗಪುರ(ಪಿಟಿಐ):  ಆದರ್ಶ ಹೌಸಿಂಗ್ ಸೊಸೈಟಿ ಹಗರಣದ ತನಿಖಾ ವರದಿ ಹಾಗೂ ಈ ಸಂಬಂಧದ ‘ಕ್ರಮ ಕೈಗೊಂಡ ವರದಿ’ ಯನ್ನು (ಎಟಿಆರ್) ಮಹಾರಾಷ್ಟ್ರ ಸರ್ಕಾರ ಶುಕ್ರವಾರ ವಿಧಾನಸಭೆಯಲ್ಲಿ ಮಂಡಿಸಿತು.

ಇಬ್ಬರು ಸದಸ್ಯರ ನ್ಯಾಯಾಂಗ ಆಯೋಗದ ವರದಿ ಹಾಗೂ ಎಟಿಆರ್‌ ಅನ್ನು ಮುಖ್ಯಮಂತ್ರಿ ಪೃಥ್ವಿರಾಜ್‌ ಚವಾಣ್‌್ ವಿಧಾನಸಭೆಯ ಚಳಿಗಾಲದ ಅಧಿವೇಶನದ ಕೊನೆ ದಿನ ಮಂಡಿಸಿದರು.

ಆದರೆ, ನ್ಯಾಯಾಂಗ ಆಯೋಗದ ವರದಿಯನ್ನು ಮಹಾರಾಷ್ಟ್ರ ಸರ್ಕಾರ ತಿರಸ್ಕರಿಸಿದೆ.  ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ವಿವಾದದ ಬಿರುಗಾಳಿ ಎಬ್ಬಿಸಿದ್ದ ಈ ಹಗರಣದಲ್ಲಿ ಮೂವರು ಮಾಜಿ ಮುಖ್ಯಮಂತ್ರಿಗಳು ಸೇರಿದಂತೆ ರಾಜಕಾರಣಿಗಳು ಹಾಗೂ ನೌಕರರು ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿತ್ತು. 

  ಹಗರಣದಲ್ಲಿ ದುರಾಸೆ, ಸ್ವಜನಪಕ್ಷ ಪಾತ, ಬೇಕಾದ­ವರಿಗೆ ಒಲವು ತೋರಲಾಗಿದೆ ಎಂದು ಆಯೋಗ ಹೇಳಿದೆ.  ಸೊಸೈಟಿಯ 102 ಸದಸ್ಯ­ರಲ್ಲಿ 25 ಜನರು ಅನರ್ಹತೆ ಹೊಂದಿದ್ದಾರೆ ಹಾಗೂ 22 ಫ್ಲ್ಯಾಟ್‌ಗಳನ್ನು ಬೇನಾಮಿ ಹೆಸರಿನಲ್ಲಿ ಖರೀದಿಸಲಾಗಿದೆ ಎಂದು ತಿಳಿ­ಸಿದೆ.

ಆದರ್ಶ ಸೊಸೈಟಿಗೆ ಮಾಜಿ ಸಿ.ಎಂ ವಿಲಾಸ್‌ ರಾವ್‌ ದೇಶ್ ಮುಖ್‌್, ಅಶೋಕ್‌ ಚವಾಣ್‌, ಸುಶೀಲ್‌ ಕುಮಾರ್‌ ಶಿಂಧೆ, ಸಿ.ಎಂ ಪೃಥ್ವಿರಾಜ್‌ ಚವಾಣ್‌್ ಇತರರು ಪೋಷಕರಾಗಿದ್ದರು.  ಆದರೆ, ಅಶೋಕ್‌ ಚವಾಣ್ ಅವರೊಬ್ಬರನ್ನೇ ಆರೋಪಟ್ಟಿಯಲ್ಲಿ ಸೇರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.