ADVERTISEMENT

ಆದೇಶ ಪರಾಮರ್ಶೆಗೆ `ಸುಪ್ರೀಂ' ನಕಾರ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2013, 19:51 IST
Last Updated 23 ಏಪ್ರಿಲ್ 2013, 19:51 IST

ನವದೆಹಲಿ: ಕುಮಾರಸ್ವಾಮಿ ಪರ್ವತ ಪ್ರದೇಶದ 380 ಹೆಕ್ಟೇರ್‌ನಲ್ಲಿ ಕಬ್ಬಿಣ ಅದಿರು ತೆಗೆಯುವ ಗಣಿಗಾರಿಕೆಗೆ ಅನುಮತಿ ಕೋರಿರುವ ಕಂಪೆನಿಗಳ ಅರ್ಜಿಗಳನ್ನು ನಾಲ್ಕು ತಿಂಗಳೊಳಗಾಗಿ ಪರಿಶೀಲಿಸಲು ಕರ್ನಾಟಕ ಸರ್ಕಾರಕ್ಕೆ ನೀಡಿದ್ದ ಆದೇಶವನ್ನು ಪರಾಮರ್ಶಿಸಬೇಕು ಎಂಬ ಮನವಿಯನ್ನು ಸುಪ್ರೀಂಕೋರ್ಟ್ ಮಂಗಳವಾರ ತಳ್ಳಿಹಾಕಿದೆ.

2010ರ ಸೆ. 13ರಂದು ಹೊರಡಿಸಿದ್ದ ಆದೇಶ ಪರಾಮರ್ಶಿಸಬೇಕು ಎಂಬ ಕೇಂದ್ರ ಸರ್ಕಾರ ಮತ್ತು ಇತರರ ಮನವಿಯನ್ನು ನ್ಯಾಯಮೂರ್ತಿ ಪಿ. ಸದಾಶಿವಂ ಮತ್ತು ಎಚ್. ಎಲ್. ದತ್ತು ಅವರನ್ನು ಒಳಗೊಂಡ ನ್ಯಾಯಪೀಠವು ತಳ್ಳಿಹಾಕಿದೆ.

ಮೊದಲು ನೀಡಿದ ತೀರ್ಪು ಅಥವಾ ಆದೇಶದಲ್ಲಿ ದೊಡ್ಡ ಪ್ರಮಾಣದ ಪ್ರಮಾವಾಗಿದ್ದರೆ ಮಾತ್ರ ತೀರ್ಪು ಪರಾಮರ್ಶೆ ಅರ್ಜಿಯನ್ನು ಪರಿಶೀಲಿಸಬಹುದಾಗಿದೆ. ಆದರೆ ಪ್ರಸಕ್ತ ಪ್ರಕರಣದಲ್ಲಿ ಅಂತಹ ಪ್ರಮಾದವೇನೂ ಜರುಗಿಲ್ಲ. ಆದ್ದರಿಂದ ಮನವಿಯನ್ನು ತಿರಸ್ಕರಿಸಲಾಗಿದೆ ಎಂದು ನ್ಯಾಯಪೀಠ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.