ADVERTISEMENT

ಆರುಷಿ: ಬಂಧನ ವಾರೆಂಟ್ ಅವಧಿ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2012, 19:30 IST
Last Updated 18 ಏಪ್ರಿಲ್ 2012, 19:30 IST

ಗಾಜಿಯಾಬಾದ್ (ಐಎಎನ್‌ಎಸ್): ಆರುಷಿ ಕೊಲೆಗೆ ಸಂಬಂಧಿಸಿದಂತೆ ಆಕೆಯ ತಾಯಿ, ದಂತವೈದ್ಯೆ ನೂಪುರ್ ತಲ್ವಾರ್ ಅವರ ವಿರುದ್ಧ ಹೊರಡಿಸಲಾದ ಜಾಮೀನು ರಹಿತ ಬಂಧನದ ವಾರೆಂಟ್ ಅವಧಿಯನ್ನು ಏಪ್ರಿಲ್ 30ರವರೆಗೆ ಸಿಬಿಐ ಕೋರ್ಟ್ ವಿಸ್ತರಿಸಿದೆ.

ನೂಪುರ್ ಅವರನ್ನು ಬಂಧಿಸಲು ಹೊಸ ವಾರೆಂಟ್‌ನ ಅಗತ್ಯವಿದ್ದು, ಮೊದಲು ಜಾರಿ ಮಾಡಲಾದ ವಾರೆಂಟ್‌ನ ಕಾಲಾವಧಿ ಬುಧವಾರ ಮುಗಿದಿದೆ ಎಂದು ತನಿಖಾ ಸಂಸ್ಥೆ ವಾದಿಸಿತ್ತು. ಸುಪ್ರೀಂಕೋರ್ಟ್‌ನ ಮುಂದೆ ಜಾಮೀನು ಅರ್ಜಿ ಬಾಕಿ ಇರುವುದರ ಆಧಾರದ ಮೇಲೆ ಸಿಬಿಐನ ಅರ್ಜಿಯನ್ನು ತಲ್ವಾರ್ ಪರ ವಕೀಲರು ವಿರೋಧಿಸಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.