ADVERTISEMENT

ಆಶಾ ಭೋಂಸ್ಲೆ: ಗಾಯನದಲ್ಲಿ ಗಿನ್ನಿಸ್ ದಾಖಲೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2011, 19:30 IST
Last Updated 22 ಅಕ್ಟೋಬರ್ 2011, 19:30 IST
ಆಶಾ ಭೋಂಸ್ಲೆ: ಗಾಯನದಲ್ಲಿ ಗಿನ್ನಿಸ್ ದಾಖಲೆ
ಆಶಾ ಭೋಂಸ್ಲೆ: ಗಾಯನದಲ್ಲಿ ಗಿನ್ನಿಸ್ ದಾಖಲೆ   

ಮುಂಬೈ, (ಪಿಟಿಐ): ಮಧುರ ಕಂಠಸಿರಿಯ ಹಿನ್ನೆಲೆ ಗಾಯಕಿ ಆಶಾ ಭೋಂಸ್ಲೆ ಅತ್ಯಧಿಕ ಹಾಡುಗಳನ್ನು ಹಾಡಿ ಗಿನ್ನಿಸ್ ದಾಖಲೆ ಮಾಡಿದ್ದಾರೆ.

ಆಶಾ 20ಕ್ಕೂ ಹೆಚ್ಚು ಭಾಷೆಗಳಲ್ಲಿ ಒಟ್ಟು 11,000 ಹಾಡುಗಳನ್ನು ಆಡಿದ್ದಾರೆ.  ಇದ್ದರಲ್ಲಿ ಸೋಲೊ (ಏಕ ವ್ಯಕ್ತಿ ಗಾಯನ), ಡುಯೆಟ್ (ಯುಗಳ ಗೀತೆ) ಮತ್ತು ಕೋರಸ್ (ಸಮೂಹ ಗಾಯನ) ಎಲ್ಲ ಪ್ರಕಾರಣಗಳೂ ಸೇರಿವೆ. ಅವರು 1947ರಿಂದ `ಮೆಹಬೂಬಾ ಮೆಹಬೂಬಾ~, `ಚುರಾಲಿಯಾ ಹೈ ತುಮ್ನೆ~, `ಪಿಯಾ ತು ಅಬ್ ತೊ ಆಜಾ~ ಮತ್ತು ಇನ್ನೂ ಅನೇಕ ಹಾಡುಗಳನ್ನು ದೇಶದ 20 ಭಾಷೆಗಳಲ್ಲಿ ಹಾಡಿದ್ದಾರೆ.

ಈ ದಾಖಲೆ ಹಿನ್ನೆಲೆಯಲ್ಲಿ 78 ವರ್ಷದ ಆಶಾ ಅವರಿಗೆ ಬರುವ ಗುರುವಾರ ಲಂಡನ್‌ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. `ನನ್ನ ಹಾಡನ್ನು ವಿಶ್ವವೇ ಗುರುತಿಸಿದೆ ಎಂದು ಅನಿಸುತ್ತಿದೆ. ಅಭಿಮಾನಿ ಮತ್ತು ಹಿತೈಷಿಗಳಿಗೆ ಧನ್ಯವಾದಗಳು. ಮುಂದೆಯೂ ಅವರ ಪ್ರೀತಿ-ವಿಶ್ವಾಸ ಹೀಗೆ ಇರಲಿ ಎಂದು ಆಶಿಸುತ್ತೇನೆ~ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.