ADVERTISEMENT

ಇಂದು ಚೆನ್ನೈಗೆ ಅಡ್ವಾಣಿ, ಮೋದಿ

​ಪ್ರಜಾವಾಣಿ ವಾರ್ತೆ
Published 13 ಜನವರಿ 2012, 19:30 IST
Last Updated 13 ಜನವರಿ 2012, 19:30 IST

ಚೆನ್ನೈ (ಪಿಟಿಐ): ಬಿಜೆಪಿಯ ಹಿರಿಯ ಮುಖಂಡ ಎಲ್.ಕೆ. ಅಡ್ವಾಣಿ ಮತ್ತು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಶನಿವಾರ ಇಲ್ಲಿಗೆ    ಆಗಮಿಸಲಿದ್ದಾರೆ.  ಈ ಸಂದರ್ಭದಲ್ಲಿ ತಮಿಳುನಾಡು ಮುಖ್ಯಮಂತ್ರಿ ಮತ್ತು ಎಐಎಡಿಎಂಕೆ ನಾಯಕಿ ಜೆ. ಜಯಲಲಿತಾ ಅವರನ್ನು ಭೇಟಿಯಾಗುವ ಸಾಧ್ಯತೆ ಇದೆ.

 ಬಿಜೆಪಿಯ ಈ ಇಬ್ಬರು ಮುಖಂಡರು ಜಯಲಲಿತಾ ಒತೆ ಉತ್ತಮ ಬಾಂಧವ್ಯ ಹೊಂದಿದ್ದು, ಚೋ ರಾಮಸ್ವಾಮಿ ಸಂಪಾದಕತ್ವದ `ತುಘಲಕ್~ ತಮಿಳು ರಾಜಕೀಯ ವಾರಪತ್ರಿಕೆ 42ನೇ ವಾರ್ಷಿಕೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.

ಒಂದು ವೇಳೆ ಈ ಇಬ್ಬರೂ ಮುಖಂಡರು ಮತ್ತು ಜಯಲಲಿತಾ ಭೇಟಿಯಾದರೆ, 2014ರ ಲೋಕಸಭೆ ಚುನಾವಣೆ ನಂತರ ಕೇಂದ್ರದಲ್ಲಿ ಸರ್ಕಾರ ರಚನೆಯಲ್ಲಿ ಎಐಎಡಿಎಂಕೆ ಪ್ರಮುಖ ಪಾತ್ರ ವಹಿಸಲಿದೆ ಎಂದು ಜಯಾ ಹೇಳಿಕೆ ಬಳಿಕದ ಮೊದಲ ಭೇಟಿ ಇದಾಗಲಿದೆ. ಆದಾಗ್ಯೂ ಸಂಭಾವ್ಯ ಭೇಟಿ ಬಗ್ಗೆ ಇದುವರೆಗೂ ಖಚಿತವಾಗಿಲ್ಲ.

ಜಯಲಲಿತಾ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಮೋದಿ ತೆರಳಿದ್ದರು. ಕಳೆದ ವರ್ಷ ಗುಜರಾತ್‌ನಲ್ಲಿ  ಮೋದಿ ಕೈಗೊಂಡಿದ್ದ ಸದ್ಭಾವನಾ ಉಪವಾಸಕ್ಕೆ ಜಯಾ ತಮ್ಮ ಇಬ್ಬರು ಪ್ರತಿನಿಧಿಗಳನ್ನು ಕಳುಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.