ADVERTISEMENT

ಇಂದು ಭೂ ಗ್ರಹದ ಸಮೀಪಕ್ಕೆ ಸೂರ್ಯ

​ಪ್ರಜಾವಾಣಿ ವಾರ್ತೆ
Published 1 ಜನವರಿ 2013, 19:59 IST
Last Updated 1 ಜನವರಿ 2013, 19:59 IST
ಇಂದು ಭೂ ಗ್ರಹದ ಸಮೀಪಕ್ಕೆ ಸೂರ್ಯ
ಇಂದು ಭೂ ಗ್ರಹದ ಸಮೀಪಕ್ಕೆ ಸೂರ್ಯ   

ನವದೆಹಲಿ (ಪಿಟಿಐ): ಸೌರವ್ಯೆಹದ ಅಧಿಪತಿಯಾದ ಸೂರ್ಯನು ಬುಧವಾರ ವರ್ಷದ ಅತ್ಯಂತ ಸಮೀಪ ಬಿಂದುವಿನಲ್ಲಿ ಗೋಚರಿಸಲಿದ್ದಾನೆ.ಬೆಳಿಗ್ಗೆ 10.10ಕ್ಕೆ ಸೂರ್ಯನು ಭೂಮಿಯಿಂದ 14.7 ಕೋಟಿ ಕಿ.ಮೀ. ದೂರದಲ್ಲಿ ಇರುತ್ತಾನೆ.

ಇದು ಈ ಎರಡು ಕಾಯಗಳ ನಡುವೆ ವರ್ಷದ ಅತ್ಯಂತ ಸಮೀಪ ಬಿಂದುವಾಗಿರುತ್ತದೆ ಎಂದು ಪ್ಲಾನೆಟರಿ ಸೊಸೈಟಿ ಆಫ್ ಇಂಡಿಯಾ ಪ್ರಧಾನ ಕಾರ್ಯದರ್ಶಿ ಎನ್. ಶ್ರೀರಘುನಂದನ್ ಕುಮಾರ್ ಹೇಳಿದ್ದಾರೆ.

ಗ್ರಹಗಳು, ಧೂಮಕೇತುಗಳು ಸೇರಿದಂತೆ ಎಲ್ಲಾ ಆಕಾಶಕಾಯಗಳು ದೀರ್ಘವೃತ್ತಾಕಾರದಲ್ಲಿ ಪರಿಭ್ರಮಿಸುವುದರಿಂದ ವರ್ಷದಲ್ಲಿ ತಲಾ ಒಂದೊಂದು ಬಾರಿ ಅತಿ ದೂರದ ಬಿಂದು ಹಾಗೂ ಅತಿ ಸಮೀಪದ ಬಿಂದುವಿನ ಮೂಲಕ ಹಾದುಹೋಗುತ್ತವೆ.ಆ ಪ್ರಕಾರ, ಸೂರ್ಯನು ಜುಲೈ 5ರಂದು ಅತಿ ದೂರದ ಬಿಂದುವಿನಲ್ಲಿ ಗೋಚರಿಸುತ್ತಾನೆ.

ಗಮನಾರ್ಹ ಸಂಗತಿಯೆಂದರೆ, ಸೂರ್ಯನು ಭೂಮಿಗೆ ಅತ್ಯಂತ ಸಮೀಪ ಬಿಂದುವಿಗೆ ಆಗಮಿಸುವ ಪ್ರಕಾಶಮಾನವಾದ ಹಗಲಿನಲ್ಲಿ ಕೂಡ ಭೂ ತಾಪಮಾನ ಹೆಚ್ಚಾಗುವುದಿಲ್ಲ. ಇದಕ್ಕೆ ಹಲವು ಕಾರಣಗಳಿದ್ದು, ಭೂಮಿಯ ಅಕ್ಷ ಓರೆಯಾಗಿರುವುದು ಮುಖ್ಯ ಕಾರಣವಾಗಿದೆ.

ಋತುಮಾನಗಳ ಭಿನ್ನತೆ ಕೂಡ ಭೂಮಿಯ ಅಕ್ಷದ ಓರೆಯನ್ನು ಅವಲಂಬಿಸಿದೆಯೇ ಹೊರತು ಭೂಮಿ-ಸೂರ್ಯನ ನಡುವಿನ ಅಂತರವನ್ನು ಅಲ್ಲ ಎಂದು ಶ್ರೀರಘುನಂದನ್ ವಿವರಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.