
ಪ್ರಜಾವಾಣಿ ವಾರ್ತೆನವದೆಹಲಿ (ಐಎಎನ್‌ಎಸ್): ಬಂಗಾಳಕೊಲ್ಲಿ ಬಹು ಉದ್ದೇಶಿತ ತಾಂತ್ರಿಕ ಹಾಗೂ ಆರ್ಥಿಕ ಸಹಕಾರ (ಬಿಐಎಮ್‌ಎಸ್‌ಟಿಇಸಿ) ಪ್ರಾದೇಶಿಕ ಒಪ್ಪಂದಗಳ ಕುರಿತಾದ ಸಭೆಯಲ್ಲಿ ಭಾಗವಹಿಸಿಲು ಪ್ರಧಾನಿ ಮನಮೋಹನ್ಸಿಂಗ್ ಅವರು ಮ್ಯಾನ್ಮಾರ್ ರಾಜಧಾನಿ ನೈ ಪಿ ತಾವ್‌ಗೆ ಸೋಮವಾರ ತೆರಳಲಿದ್ದಾರೆ.
ಆರು ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಮಾತುಕತೆಯ ನಾಯಕತ್ವ ವಹಿಸಲಿರುವ ಮನಮೋಹನ್ ಸಿಂಗ್ ಅವರಿಗೆ ಪ್ರಧಾನಿಯಾಗಿ ಬಹುತೇಕ ಇದು ಕೊನೆಯ ವಿದೇಶ ಪ್ರವಾಸ ಎಂದು ಹೇಳಲಾಗಿದೆ.
ಮ್ಯಾನ್ಮಾರ್ ಅಧ್ಯಕ್ಷ ಯು.ಥೇನ್ ಸೇನ್ ಸೇರಿದಂತೆ ಬಾಂಗ್ಲಾದೇಶದ ಅಧ್ಯಕ್ಷೆ ಶೇಕ್ ಹಸೀನಾ, ಶ್ರೀಲಂಕಾ ಅಧ್ಯಕ್ಷ ಮಹಿಂದ ರಾಜಪಕ್ಸೆ, ನೇಪಾಳದ ನೂತನ ಪ್ರಧಾನಿ ಸುಶೀಲ್ ಕೊಯಿರಾಲ ಅವರೊಂದಿಗೂ ಮಾತುಕತೆ ನಡೆಸಲಿದ್ದಾರೆ.
ಒಟ್ಟು ಎರಡು ದಿನಗಳ ಕಾಲ ನಡೆಯಲಿರುವ ಪ್ರಾದೇಶಿಕ ಸಹಕಾರ ಒಪ್ಪಂದಗಳ ಕುರಿತಾದ ಮೂರನೇ ಸಭೆ ಇದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.