ತಿರುವನಂತಪುರ (ಐಎಎನ್ಎಸ್): ಕೇರಳದ ಅಲಪ್ಪುಝಾ ಕರಾವಳಿ ಪ್ರದೇಶದ ಇಬ್ಬರು ಮೀನುಗಾರರು ಮೀನು ಹಿಡಿಯುತ್ತಿದ್ದ ಸಂದರ್ಭದಲ್ಲಿ ಅವರನ್ನು ಕಡಲ್ಗಳ್ಳರು ಎಂದು ತಪ್ಪಾಗಿ ಭಾವಿಸಿ ಗುಂಡು ಹಾರಿಸಿ ಹತ್ಯೆ ಮಾಡಿ, ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ, ಇಟಲಿ ನೌಕಾ ಸಿಬ್ಬಂದಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ಕೇರಳ ನ್ಯಾಯಾಲಯವು ಸೋಮವಾರ ಏ. 30ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ.
ಇಟಲಿಯ ಎನ್ರಿಕಾ ಲೆಕ್ಸಿ ಹಡಗಿನ ಇಬ್ಬರು ಸಿಬ್ಬಂದಿಗಳು ಇಲ್ಲಿನ ಕೇಂದ್ರ ಕಾರಾಗ್ರಹದಲ್ಲಿ ಬಂಧಿತರಾಗಿದ್ದು, ಕೊಲ್ಲಂ ನ್ಯಾಯಾಲಯವು ಫೆ. 20 ರಂದು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶಿಸಿತ್ತು. ಸಿಬ್ಬಂದಿಗಳ ಹೆಚ್ಚಿನ ವಿಚಾರಣೆಯ ಹಿನ್ನೆಲೆಯಲ್ಲಿ ಅಧಿಕಾರಿಗಳಿಗೆ ನ್ಯಾಯಾಲಯವು ಮೂರು ದಿನಗಳ ವಿಚಾರಣೆಯ ಅವಕಾಶವನ್ನು ಕೂಡ ನೀಡಿತ್ತು.
ಇದೀಗ ಬಂದರು ಅಧಿಕಾರಿಗಳು ಸಿಬ್ಬಂದಿಗಳ ಇನ್ನೂ ಹೆಚ್ಚಿನ ವಿಚಾರಣೆಯ ಅವಶ್ಯವಿದೆ ಎಂದು ಮನವಿ ಮಾಡಿಕೊಂಡಿದ್ದರಿಂದ ನ್ಯಾಯಾಲಯವು ಮತ್ತೊಮ್ಮೆ ಸಿಬ್ಬಂದಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ಎರಡನೆ ಬಾರಿಗೆ ವಿಸ್ತರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.